ಮಸ್ಕತ್, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಸ್ಕತ್‌ನಲ್ಲಿ ನಡೆದ 2025ರ ಏಷ್ಯಾ ರಗ್ಬಿ ಎಮಿರೇಟ್ಸ್ ಸೆವೆನ್ಸ್ ಟ್ರೋಫಿಯಲ್ಲಿ ಭಾರತವು ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಫೈನಲ್‌ನಲ್ಲಿ ಕಜಕಿಸ್ತಾನ್ ವಿರುದ್ಧ 27–0 ಅಂತರದಿಂದ ಸೋತ ಭಾರತ, ಮುಂದಿನ ಹಂತದ ಏಷ್ಯಾ ರಗ್ಬಿ ಎಮಿರೇಟ್ಸ್ ಸೆವೆನ್ಸ್ ಸರಣಿಗೆ ಬಡ್ತಿ ಪಡೆದಿದೆ.
ಇಂಗ್ಲೆಂಡ್‌ನ ಮಾಜಿ ಆಟಗಾರ ಬೆನ್ ಗೊಲಿಂಗ್ಸ್ ಅವರ ಮಾರ್ಗದರ್ಶನದಲ್ಲಿ ಆಡಿದ ಭಾರತೀಯ ತಂಡವು ಟೂರ್ನಮೆಂಟ್‌ನಾದ್ಯಂತ ಶಿಸ್ತು ಮತ್ತು ತಾಂತ್ರಿಕ ಕೌಶಲ್ಯ ತೋರಿತು. ಗುಂಪು ಹಂತದಲ್ಲಿ ಲೆಬನಾನ್ (14–10) ಮತ್ತು ಅಫ್ಘಾನಿಸ್ತಾನ್ (26–5) ವಿರುದ್ಧ ಜಯಗಳಿಸಿದ ಭಾರತ, ಕ್ವಾರ್ಟರ್ ಫೈನಲ್‌ನಲ್ಲಿ ಇರಾನ್ (21–7) ಹಾಗೂ ಸೆಮಿಫೈನಲ್‌ನಲ್ಲಿ ಸೌದಿ ಅರೇಬಿಯಾ (17–0) ವಿರುದ್ಧ ಗೆದ್ದು ಫೈನಲ್ ತಲುಪಿತ್ತು.
ಭಾರತದ ಈ ಸಾಧನೆಯನ್ನು ತರಬೇತುದಾರ ಬೆನ್ ಗೊಲಿಂಗ್ಸ್ ಮತ್ತು ಭಾರತೀಯ ರಗ್ಬಿ ಫುಟ್‌ಬಾಲ್ ಒಕ್ಕೂಟದ ಅಧ್ಯಕ್ಷ ರಾಹುಲ್ ಬೋಸ್ ಶ್ಲಾಘಿಸಿದ್ದಾರೆ. ಈ ಗೆಲುವಿನಿಂದ ಭಾರತ ಏಷ್ಯಾದ ಪ್ರೀಮಿಯರ್ ರಗ್ಬಿ ತಂಡಗಳಾದ ಹಾಂಗ್ ಕಾಂಗ್, ಜಪಾನ್, ಚೀನಾ ಮತ್ತು ಶ್ರೀಲಂಕಾ ಸೇರಿದಂತೆ ಅಗ್ರ ವಿಭಾಗದಲ್ಲಿ ಸ್ಥಾನ ಪಡೆದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
