ಗದಗ, 10 ಅಕ್ಟೋಬರ್ (ಹಿ.ಸ.)
ಆ್ಯಂಕರ್:
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗದಗ ಮತಕ್ಷೇತ್ರದಲ್ಲಿ ಶೇ 100 ರಷ್ಟು ಗುರಿ ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿಯೇ ಮಾದರಿ ಕಾರ್ಯ ಮಾಡಲು ಸಚಿವರಾದ ಎಚ್.ಕೆ. ಪಾಟೀಲ ಅವರು ಸೂಚಿಸಿದ್ದು ಜನರು ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಗದಗ ತಾಲೂಕಾ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾದಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ ಹೇಳಿದರು.
ಸಮೀಪದ ನಾಗಾವಿ ಗ್ರಾಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಾರ್ವಜನಿಕ ಅಹವಾಲು ಸ್ವೀಕಾರ ಅಹವಾಲು ಸಲ್ಲಿಕೆ ಪರಿಹಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡ ಜನರ ಬದುಕು ರೂಪಿಸುವಲ್ಲಿ ಗ್ಯಾರಂಟಿ ಯೋಜನೆಗಳು ಮಹತ್ವದ್ದಾಗಿದ್ದು ಕಾನೂನು ಸಚಿವರಾದ ಎಚ್.ಕೆ. ಪಾಟೀಲ ಅವರ ಮಾರ್ಗದರ್ಶನದಂತೆ ಗದಗ ಮತಕ್ಷೇತ್ರದಲ್ಲಿ ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂದರು.
ಸರ್ಕಾರದ ಯೋಜನೆಗಳು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಜನರಿಗೆ ತಲುಪಲು ಜನರ ಬಳಿಗೆ ಸಭೆ ಮಾಡುವ ಮೂಲಕ ಸಮಸ್ಯೆಗೆ
ಸ್ಥಳದಲ್ಲಿ ಪರಿಹಾರ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳ ಸಮೇತ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆ ನಡೆಸುತ್ತಿದ್ದು ಬಹುತೇಕ ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷರಾದ ಬಿ.ಆರ್. ದೇವರಡ್ಡಿ ಮಾತನಾಡಿ ಜನರ ಬಳಿಗೆ ಸರ್ಕಾರ ಎನ್ನುವ ಕಲ್ಪನೆಯ ಮೂಲಕ ಸರ್ಕಾರದ ಹಲವು ಯೋಜಬೆಗಳು ಹಾಗೂ ಪಂಚ ಗ್ಯಾರಂಟಿ ಅನುಷ್ಠಾನ ಮಾಡುವ ಮೂಲಕ ಬಡವರ ಬದುಕು ಹಸನಾಗಬೇಕು ಆ ನಿಟ್ಟಿನಲ್ಲಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಠಿಯಿಂದ ಜಾರಿಗೆ ಬಂದ ಯೋಜನೆಗಳು ಜನೋಪಕಾರಿಯಾಗಿವೆ ಎಂದರು.
ಗದಗ ತಾಲ್ಲೂಕು ಗ್ಯಾರಂಟಿ ಯೋಜನಾ ಪ್ರಾದಿಕಾರದ ಸದಸ್ಯರಾದ ಕೆ.ಎಚ್. ಪಾಟೀಲ ಮಾತನಾಡಿ, ಬಡ ಜನರು ನೆಮ್ಮದಿಯಿಂದ ಬದುಕಬೇಕು. ಅವರದೂ ಸ್ವಾಭಿಮಾನದ ಜೀವನವಾಗಬೇಕು, ಗ್ರಾಮಾಂತರ ಪ್ರದೇಶಗಳಲ್ಲಿ ಗುಣಮಟ್ದ ಶಿಕ್ಷಣ, ಅನ್ನ, ಆರೋಗ್ಯ, ಉದ್ಯೋಗ ಸೇರಿದಂತೆ ಹಕ್ಕಿನ ಬದುಕು ನೆಮ್ಮದಿಯ ವಾತಾವರಣ ನಿರ್ಮಾಣವಾಗುವ ಮೂಲಕ ಗ್ರಾಮಗಳು ಆದರ್ಶವಾಗಬೇಕು ಆ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಸದುಪವಾಗಬೇಕೆನ್ನುವ ಉದ್ದೇಶದೊಂದಿಗೆ ಆಡಳಿತವನ್ನು, ಗ್ಯಾರಂಟಿ ಪ್ರಾದಿಕಾರವನ್ನು ಜನರ ಬಳಿಗೆ ತರಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾದಿಕಾರದ ಸದಸ್ಯರಾದ ದಯಾನಂದ ಪವಾರ, ಸಾವಿತ್ರಿ ಹೂಗಾರ, ನಿಂಗಪ್ಪ ದೇಸಾಯಿ, ಗ್ರಾಪಂ ಅಧ್ಯಕ್ಷ ಉಳಿಯಪ್ಪ ಬಸಪ್ಪ ಸಿಗ್ಲಿ ಹಾಗೂ ಉಪಾಧ್ಯಕ್ಷರಾಗಿ ಸುಮಾ ಶಿವಾನಂದ ತಳವಾರ ಹಾಗೂ ಸದಸ್ಯರಾದ ಹಜರೇಸಾಬ ಹುಸೇನ್ ಸಾಬ ನದಾಫ, ಗವಿಯಪ್ಪ ಪೂಜಾರ, ಕುಬೇರಪ್ಪ ರಾಠೋಡ ವೆಮು ಬಾಗಲಕೋಟಿ , ಸುರೇಶ ಪವಾರ, ಅಲ್ಲಾಸಾಬ ಪೀರಖಾನವರ, ಹನಮವ್ವ ಶಿದ್ನೆಕೋಪ್ಪ, ಸರಸ್ವತಿ ಮರಬರಡ್ಡಿ, ಪಾರವ್ವ ಗೋರವರ, ಹನುಮವ್ವ ಗುಡಿಮನಿ, ಗೌರಿ ತೋಟದ, ಕವಿತಾ ಪವಾರ್ ಮೀರಾಬಾಯಿ ಲಮಾಣಿ, ನಾಗಾವಿ ಹಾಗೂ ನಾಗಾವಿತಾಂಡೆಯ ಹಿರಿಯರಾದ ಐ ಬಿ ಬಿಂಕದಕಟ್ಟಿ, ಶಾರದ ತೋಟದ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಕೆ ಎಂ ಗೋವಿಂದರಡ್ಡಿ, ಗೋವಿಂದರಡ್ಡಿ ಕುಷ್ಟರಡಿ, ರೈಮನಸಾಬ್ ನದಾಫ, ಅಡಿವೆಪ್ಪ ಮರಿಹನಮರಡ್ಡಿ, ನಾರಾಯಣ ಮರಡ್ಡಿ, ಉಳಿವೆಯಪ್ಪ ಮಡಿವಾಳರ, ಗೋವಿಂದ ಗೌಡ್ರು ಭರಮ ಗೌಡ್ರು, ಪ್ರಕಾಶ್ ಬಾಬು ಮರಡ್ಡಿ, ಕನಕಪ್ಪ ಬೇವಿನಮರದ, ಬಸವರಾಜ ಹಾದಿಮನಿ, ಹಾಲಪ್ಪ ಮಾದರ, ಧಮ೯ಪ್ಪ ರಾಥೋಡ, ದೆವಪ್ಪ ಕುತ೯ಕೋಟಿ, ಮಾಂತೇಶ ತೋಟದ ತಾವರಪ್ಪ ಮಾಣಿ, ಮೈಲಾರಪ್ಪ ಚಲವಾದಿ, ಶಿವಾನಂದ ತಳವಾರ ಸುಲೇಮಾನ ಸಾಬ ನಧಾಪ, ಧಮ೯ಪ್ಪ ಕೆಂಚಣ್ಣವರ, ಮುತ್ತಪ್ಪ ಮಲ್ಲಮ್ಮನವರ, ಶಂಭು ಕಾಳೆ,ಮಲ್ಲು ಬಾರಕೇರ ಗ್ರಾಮ ಗುರು ಹಿರಿಯರು ಹಾಗೂ, ಯುವಕರು ಭಾಗಿಯಾಗಿದ್ದರು.
—————
ಹಿಂದೂಸ್ತಾನ್ ಸಮಾಚಾರ್ / lalita MP
