ಲಂಡನ್, 20 ಆಗಸ್ಟ್ (ಹಿ.ಸ.) :
ಆ್ಯಂಕರ್ : ಲಿವರ್‌ಪೂಲ್ ಸ್ಟಾರ್ ಸ್ಟ್ರೈಕರ್ ಮೊಹಮ್ಮದ್ ಸಲಾಹ್ ಇತಿಹಾಸ ನಿರ್ಮಿಸಿದ್ದಾರೆ. ಅವರು ಮೂರನೇ ಬಾರಿ ವೃತ್ತಿಪರ ಫುಟ್‌ಬಾಲ್ ಆಟಗಾರರ ಸಂಘದ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಲಾಹ್ ಈ ಹಿಂದೆ 2018 ಮತ್ತು 2022 ರಲ್ಲಿ ಈ ಗೌರವ ಪಡೆದಿದ್ದರು. ಈ ಬಾರಿ ಅವರು ಲಿವರ್‌ಪೂಲ್‌ನ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್, ಮ್ಯಾಂಯುನೈಟೆಡ್‌ನ ಬ್ರೂನೋ ಫೆರ್ನಾಂಡಿಸ್, ನ್ಯೂಕ್ಯಾಸಲ್‌ನ ಅಲೆಕ್ಸಾಂಡರ್ ಇಸಾಕ್, ಚೆಲ್ಸಿಯ ಕೋಲ್ ಪಾಮರ್ ಹಾಗೂ ಆರ್ಸೆನಲ್‌ನ ಡೆಕ್ಲಾನ್ ರೈಸ್ ಅವರನ್ನು ಹಿಂದಿಕ್ಕಿದ್ದಾರೆ.
ಇದರ ಜೊತೆಗೆ, ಸಲಾಹ್ ಈ ಋತುವಿನಲ್ಲಿ ಪ್ರೀಮಿಯರ್ ಲೀಗ್ ಪ್ಲೇಯರ್ ಆಫ್ ದಿ ಸೀಸನ್ ಹಾಗೂ ಫುಟ್ಬಾಲ್ ರೈಟರ್ಸ್ ಅಸೋಸಿಯೇಷನ್ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
