ಮುಂಬಯಿ, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಹುತೇಕ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ವಿಫಲವಾಗಿವೆ. ಆದರೆ ಮೋಹಿತ್ ಸೂರಿ ನಿರ್ದೇಶನದ ‘ಸೈಯಾರಾ’ ಚಿತ್ರ ಮಾತ್ರ ಗಲ್ಲಾ ಪೆಟ್ಟಿಗೆಯಲ್ಲಿ ನಿರಂತರವಾಗಿ ಧೂಳೆಬ್ಬಿಸುತ್ತಿದ್ದು, ಅದ್ದೂರಿ ಯಶಸ್ಸು ಸಾಧಿಸುತ್ತಿದೆ.
ಬಿಡುಗಡೆಯಾದ ಮೂರನೇ ವಾರಕ್ಕೂ ‘ಸೈಯಾರಾ’ ಕಳೆಗುಂದಿಲ್ಲ. ಭಾರತದ ಗಲ್ಲಾ ಪೆಟ್ಟಿಗೆಯಲ್ಲಿ ಈಗಾಗಲೇ ₹300 ಕೋಟಿ ರೂ.ಗಳನ್ನು ದಾಟಿರುವ ಈ ಸಿನಿಮಾ, 2025ರ ಪ್ರಮುಖ ವಾಣಿಜ್ಯಬದ್ಧ ಯಶಸ್ಸುಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಬಾಕ್ಸ್ ಆಫೀಸ್ ಟ್ರ್ಯಾಕರ್ ಸಕ್ನಿಲ್ಕ್ ಅಂಕಿಅಂಶಗಳ ಪ್ರಕಾರ, ಬಿಡುಗಡೆಗೊಂಡ 18ನೇ ದಿನವಾದ ಮೂರನೇ ಸೋಮವಾರದಲ್ಲಿ ಚಿತ್ರವು ₹2.50 ಕೋಟಿ ರೂ. ಗಳಿಸಿದ್ದು, ಒಟ್ಟು ಕಲೆಕ್ಷನ್‌ನ್ನು ₹302.25 ಕೋಟಿ ರೂ.ಗೆ ಏರಿದೆ.
‘ಸೈಯಾರಾ’ ದೇಶೀಯ ಮಾರುಕಟ್ಟೆಯಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಶ್ರೇಷ್ಠ ಪ್ರದರ್ಶನ ನೀಡುತ್ತಿದೆ. ಈವರೆಗೆ ಚಿತ್ರದ ಜಾಗತಿಕ ಗಳಿಕೆ ₹460.15 ಕೋಟಿ ರೂ.ಗಳನ್ನು ಮೀರಿದ್ದು, ಸಿನಿಮಾ ತೀವ್ರ ಗತಿಯಲ್ಲೇ ಮುಂದುವರಿಯುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ.
ಚಿತ್ರದಲ್ಲಿ ಅನಿತಾ ಪಡ್ಡಾ ಅಭಿನಯದ ವಾಣಿ ಬಾತ್ರಾ ಹಾಗೂ ಅಹಾನ್ ಪಾಂಡೆ ಅಭಿನಯದ ಕ್ರಿಶ್ ಕಪೂರ್ ಅವರ ಭಾವನಾತ್ಮಕ ಅಭಿನಯವನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸಲಾಗಿದೆ. ವಾಣಿ, ಪ್ರೇಮದಲ್ಲಿ ತೀವ್ರವಾಗಿ ಗಾಯಗೊಂಡ ಯುವತಿ, ಕ್ರಿಶ್, ತನ್ನ ಮುರಿದ ಕನಸುಗಳನ್ನು ಮರುಜೀವನ ನೀಡಲು ಪ್ರಯತ್ನಿಸುವ ಹುಡುಗ – ಈ ಇಬ್ಬರ ಕಥಾನಕ, ಭಾವನೆ ಹಾಗೂ ಸಂಬಂಧಗಳ ಸಂಕೀರ್ಣತೆಯನ್ನು ಚಿತ್ರವು ಸೂಕ್ಷ್ಮವಾಗಿ ನವಿರಾಗಿ ಅನಾವರಣ ಮಾಡುತ್ತದೆ.
ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನದ ಬಳಿಕ ಈಗ ‘ಸೈಯಾರಾ’ ಥಿಯೇಟರ್ ಬಿಟ್ಟು ನೆಟ್‌ಫ್ಲಿಕ್ಸ್‌ನಲ್ಲಿ ಡಿಜಿಟಲ್ ಪ್ರೀಮಿಯರ್ ಆಗುತ್ತಿದೆ. ವಿಶೇಷವೆಂದರೆ, ಯಶ್ ರಾಜ್ ಫಿಲ್ಮ್ಸ್‌ನ ಥಿಯೇಟ್ರಿಕಲ್ ಬಿಡುಗಡೆಯಾದ ಮೊದಲ ಸಿನಿಮಾ ಇದಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಇದೀಗ ಪ್ರೇಕ್ಷಕರು ‘ಸೈಯಾರಾ’ ಚಿತ್ರವನ್ನು ತಮ್ಮ ಮನೆಯಲ್ಲಿ ವೀಕ್ಷಿಸುವ ಅವಕಾಶ ಸಿಕ್ಕಿದ್ದು, ಚಿತ್ರಮಂದಿರ ಹಾಗೂ ಓಟಿಟಿ ಪ್ಲಾಟ್‌ಫಾರ್ಮ್ ಎರಡಲ್ಲಿಯೂ ಸಿನಿಮಾ ವಿಜಯಗಾಥೆ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
