ಜಲಂಧರ್, 20 ಜುಲೈ (ಹಿ.ಸ.) :
ಆ್ಯಂಕರ್ : ವಿಶ್ವದ ಹಿರಿಯ ಮ್ಯಾರಥಾನ್ ಕ್ರೀಡಾಪಟು ಫೌಜಾ ಸಿಂಗ್ (114) ಅವರ
ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಜಲಂಧರ್ ಜಿಲ್ಲೆಯ ಬಿಯಾಸ್ ಪಿಂಡ್ ನಲ್ಲಿ ನೆರವೇರಲಿದೆ.
ಕೆನಡಾ ಮತ್ತು ಇಂಗ್ಲೆಂಡ್‌ನಲ್ಲಿರುವ ಅವರ ಕುಟುಂಬಸ್ಥರು ಅಂತ್ಯಕ್ರಿಯೆಗಾಗಿ ಜಲಂಧರ್ ತಲುಪಿದ್ದಾರೆ.
ಜುಲೈ 14ರಂದು ಪಠಾಣ್‌ಕೋಟ್-ಜಲಂಧರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಫಾರ್ಚೂನರ್ ಕಾರು ಡಿಕ್ಕಿಯಿಂದ ಮೃತಪಟ್ಟಿದ್ದರು.
ಘಟನೆ ಬಿಯಾಸ್ ಪಿಂಡ್ ಗ್ರಾಮದ ಬಳಿ ಸಂಭವಿಸಿತು. ಅಪಘಾತಕ್ಕೆ ಕಾರಣವಾದ ಅನಿವಾಸಿ ಭಾರತೀಯ ಅಮೃತಪಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
