ನವದೆಹಲಿ, 07 ಜುಲೈ (ಹಿ.ಸ.) :
ಆ್ಯಂಕರ್ : ಬ್ರಿಕ್ಸ್ ಶೃಂಗಸಭೆಯು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಸ್ಪಷ್ಟ ಸಂದೇಶ ನೀಡಿರುವುದು ಭಾರತದ ಮಹತ್ವದ ರಾಜತಾಂತ್ರಿಕ ಜಯವೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ಹೇಳಿದ್ದಾರೆ.
ಇದು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯ ಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ದೆಹಲಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಭಾರತದ ಶೂನ್ಯ ಸಹಿಷ್ಣುತೆ ನೀತಿ ಜಗತ್ತಿನಾದ್ಯಾಂತ ಮಾದರಿಯಾಗಿದೆ. ಈಗ ಇಡೀ ವಿಶ್ವ ಭಯೋತ್ಪಾದನೆ ವಿರುದ್ಧ ಏಕತೆಯಾಗಿದ್ದು, ಭಾರತ ಅದರ ಮುಂದಾಳುತ್ವ ವಹಿಸಿಕೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ ಅವರು ಇಂಡಿ ಮೈತ್ರಿಕೂಟದ ನಾಯಕರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು. ಕನ್ವರ್ ಯಾತ್ರೆ ಮತ್ತು ಇತರ ಹಿಂದೂ ಧಾರ್ಮಿಕ ಆಚರಣೆಗಳ ಬಗ್ಗೆ ಅವರ ನಿಲುವು ತಿಳಿಯುತ್ತಿಲ್ಲ ಎಂದರು. ಕೆಲವೊಮ್ಮೆ ಇಂತಹ ಯಾತ್ರೆಗಳಲ್ಲಿ ಭಾಗವಹಿಸುವ ಭಕ್ತರನ್ನು ಭಯೋತ್ಪಾದಕರಿಗೆ ಹೋಲಿಸುವುದು ನಿಂದನೀಯ ಎಂದು ಹೇಳಿದರು.
ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಕೇರಳದಲ್ಲಿ ಎಡಪಂಥೀಯರು ಹಾಗೂ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳು ತೋರಿಸುತ್ತಿರುವ ತುಷ್ಟೀಕರಣ ರಾಜಕೀಯ ಮತ್ತು ಸ್ವಜನಪಕ್ಷಪಾತದ ವಿರುದ್ಧ ಬಿಜೆಪಿ ತನ್ನ ಬಲವನ್ನು ವಿಸ್ತರಿಸಬೇಕು ಎಂಬ ಅಗತ್ಯವಿದೆ ಎಂದು ಚುಗ್ ಅಭಿಪ್ರಾಯಪಟ್ಟರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
