ನವದೆಹಲಿ, 07 ಜುಲೈ (ಹಿ.ಸ.) :
ಆ್ಯಂಕರ್ : ದೇಶದ ಚಿನಿವಾರ ಮಾರುಕಟ್ಟೆಯಲ್ಲಿ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಸರಾಸರಿ ₹500 ಇಳಿದು ₹98,250 ರಿಂದ ₹98,440 ರ ನಡುವೆ ವಹಿವಾಟು ನಡೆಯುತ್ತಿದೆ. 22 ಕ್ಯಾರೆಟ್ ಚಿನ್ನ ₹90,100 ರಿಂದ ₹90,250 ದರದಲ್ಲಿ ಮಾರಾಟವಾಗುತ್ತಿದೆ.
ಬೆಳ್ಳಿಯ ದರ ಪ್ರತಿ ಕಿಲೋಗ್ರಕ್ಕೆ ₹100 ಇಳಿಕೆಯಾಗಿದ್ದು, ದೆಹಲಿಯಲ್ಲಿ ₹1,09,900ಕ್ಕೆ ಲಭ್ಯವಿದೆ. ಬೆಂಗಳೂರು, ಹೈದರಾಬಾದ್, ಭುವನೇಶ್ವರ ಸೇರಿ ಹೆಚ್ಚಿನ ನಗರಗಳಲ್ಲಿ ಚಿನ್ನದ ದರ ₹98,290 (24 ಕ್ಯಾರೆಟ್) ಮತ್ತು ₹90,100 (22 ಕ್ಯಾರೆಟ್) ಆಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
