ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು 18 ಶಾಸಕರ ಅಮಾನತು ಆದೇಶವನ್ನು ವಾಪಸ್ ಪಡೆಯದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮತ್ತು ಸಭಾಧ್ಯಕ್ಷ ಯು.ಟಿ. ಖಾದರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
BulletsIn
-
18 ಶಾಸಕರು ಮುಸ್ಲಿಮರಿಗೆ ಮೀಸಲಾತಿ ಮತ್ತು ಹನಿಟ್ರ್ಯಾಪ್ ಪ್ರಕರಣದ ವಿರೋಧದಲ್ಲಿ ಪ್ರತಿಭಟನೆ ನಡೆಸಿದ್ದರು.
-
ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರೆ ಅಥವಾ ತನಿಖೆಗೆ ಆದೇಶಿಸಿದ್ದರೆ ಪ್ರತಿಭಟನೆ ಕೈ ಬಿಡಬಹುದಿತ್ತು.
-
ಸಭಾಧ್ಯಕ್ಷ ಯು.ಟಿ. ಖಾದರ್ ಸಂಬಂದ ಪಡದವರನ್ನು ಕರೆದು ಫೋಟೋ ತೆಗೆಸಿಕೊಳ್ಳುತ್ತಾರೆ, ಆದರೆ ವಿರೋಧ ಪಕ್ಷದ ಶಾಸಕರನ್ನು ಅಮಾನತು ಮಾಡಲಾಗಿದೆ.
-
ಶಾಸಕರ ಅಮಾನತು ಸಮಯದಲ್ಲಿ ಸಭಾಧ್ಯಕ್ಷರು ಅವರನ್ನು ಭೇಟಿಯಾಗಲಿಲ್ಲ, ಸಂಭಾಷಣೆಗೆ ಅವಕಾಶ ನೀಡಲಿಲ್ಲ.
-
ಸಭಾಧ್ಯಕ್ಷರು ಕಾಂಗ್ರೆಸ್ ಸರ್ಕಾರದ ಪರ ನಿಂತು, ಪಕ್ಷಪಾತ ದೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪ.
-
ಸಚಿವ ಸಂಪುಟ ಪುನರ್ ರಚನೆಯಾಗುತ್ತಿರುವ ಹಿನ್ನೆಲೆ, ಸಭಾಧ್ಯಕ್ಷರು ಸರ್ಕಾರದ ಪರ ಕ್ರಮ ಕೈಗೊಂಡಿದ್ದಾರೆ ಎಂಬ ಆಕ್ಷೇಪ.
-
ಅಮಾನತು ಆದೇಶ ರಾಜಕೀಯ ಪ್ರೇರಿತ, ಸಭಾಧ್ಯಕ್ಷರು ಸಚಿವ ಸ್ಥಾನ ನಿರೀಕ್ಷೆಯಲ್ಲಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ.
-
ಸಭಾಧ್ಯಕ್ಷರ ಪೀಠ ಬಹಳ ಪವಿತ್ರವಾದುದು, ಆದರೆ ಅದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆಕ್ಷೇಪ.
-
ವಿರೋಧ ಪಕ್ಷದ ಸದಸ್ಯರ ಹಕ್ಕುಗಳನ್ನು ಲಂಗಸಲು ಮಾಡಲಾಗಿದೆ, ಇದನ್ನು ತೀವ್ರ ವಿರೋಧಿಸಲಾಗುವುದು.
-
ತಕ್ಷಣವೇ 18 ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
