ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಹಲವೆಡೆ ವರದಿಯಾಗುತ್ತಿವೆ. ಇದು ಸಾಂಕ್ರಾಮಿಕ ರೋಗವಾಗಿದ್ದರೂ, ಹಕ್ಕಿಗಳಿಂದ ಮನುಷ್ಯರಿಗೆ ಹರಡುವುದು ಅಪರೂಪ. ಹಾಗಾಗಿ ಭಯಪಡದೆ, ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಜನರು ಮೊಟ್ಟೆ ಮತ್ತು ಕೋಳಿ ಮಾಂಸ ಸೇವಿಸುವಾಗ ಕೆಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಹೇಳಿದ್ದಾರೆ.
BulletsIn
- ಅಗತ್ಯವಿಲ್ಲದ ಆತಂಕ ಬೇಡ – ಹಕ್ಕಿಜ್ವರದ ಪ್ರಕರಣಗಳು ವರದಿಯಾದರೂ, ಅದು ಹಕ್ಕಿಗಳಿಂದ ಮನುಷ್ಯರಿಗೆ ಹರಡುವುದು ಅಪರೂಪ.
- ಆರೋಗ್ಯಕರ ಆಹಾರ ಕ್ರಮ – ಮೊಟ್ಟೆ ಮತ್ತು ಕೋಳಿ ಮಾಂಸ ಸೇವಿಸುವ ಮುನ್ನ ಸೂಕ್ತ ರೀತಿಯಲ್ಲಿ ಬೇಯಿಸಿ ತಿನ್ನಬೇಕು.
- ತಪ್ಪದೇ ಚೆನ್ನಾಗಿ ಬೇಯಿಸಿ – 70 ಡಿಗ್ರಿ ಉಷ್ಣಾಂಶದಲ್ಲಿ ಕನಿಷ್ಠ ಅರ್ಧ ಗಂಟೆ ಬೇಯಿಸಿ ಮೊಟ್ಟೆ ಮತ್ತು ಮಾಂಸ ಸೇವಿಸಬೇಕು.
- ಕೋಳಿ ಫಾರ್ಮ್‌ಗಳಿಗೆ ತೆರಳದಿರಿ – ಹಕ್ಕಿ ಜ್ವರದ ಶಂಕೆ ಇರುವ ಕೋಳಿ ಫಾರ್ಮ್‌ಗಳಿಗೆ ಭೇಟಿ ನೀಡುವುದು ಬೇಡ.
- ಮೃತ ಹಕ್ಕಿಗಳ ಸಂಪರ್ಕಕ್ಕೆ ಹೋಗಬೇಡಿ – ಹಕ್ಕಿಜ್ವರದಿಂದ ಮೃತಪಟ್ಟ ಹಕ್ಕಿಗಳನ್ನು ಮುಟ್ಟುವುದು ತಡೆಯಬೇಕು.
- ಸ್ವಚ್ಛತೆ ಕಾಪಾಡಿ – ಮಾಂಸ ತಯಾರಿಸುವ ಮತ್ತು ಸೇವಿಸುವ ಮೊದಲು ಮತ್ತು ಬಳಿಕ ಕೈಗಳನ್ನು ಚೆನ್ನಾಗಿ ತೊಳೆಯಬೇಕು.
- ಜ್ವರ, ಕೆಮ್ಮು ಇದ್ದರೆ ತಕ್ಷಣ ಚಿಕಿತ್ಸೆ – ಹಕ್ಕಿಜ್ವರದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
- ಮಾಸ್ಕ್ ಧರಿಸಿ – ಕೋಳಿ ಫಾರ್ಮ್‌ಗಳ ಬಳಿ ತೆರಳುವವರು ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸಬಹುದು.
- ಮಕ್ಕಳಿಗೆ ವಿಶೇಷ ಜಾಗ್ರತೆ – immunity ಕಡಿಮೆ ಇರುವ ಮಕ್ಕಳನ್ನು ಮತ್ತು ಹಿರಿಯರನ್ನು ಹಕ್ಕಿಜ್ವರದ ಶಂಕಿತ ಸ್ಥಳಗಳಿಂದ ದೂರ ಇರಿಸಬೇಕು.
- ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ – ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ಅನುಸರಿಸಿ, ಸುಳ್ಳು ಮಾಹಿತಿಯನ್ನು ನಂಬಬೇಡಿ.
