ಶುಕ್ರವಾರ ಬೆಳಗ್ಗೆ ನೇಪಾಳದ ಚಿತ್ವಾನ್‌ನಲ್ಲಿ ಎರಡು ಬಸ್‌ಗಳು ನದಿಗೆ ಬಿದ್ದ ಪರಿಣಾಮ ಕನಿಷ್ಠ 65 ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಭಾರೀ ಮಳೆ, ನದಿ ಪ್ರವಾಹ ಮತ್ತು ಭೂಕುಸಿತದಿಂದ ಘಟನಾ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
BulletsIn
- ಶುಕ್ರವಾರ ಬೆಳಿಗ್ಗೆ ಚಿತ್ವಾನ್‌ನಲ್ಲಿ ಭೂಕುಸಿತ ಸಂಭವಿಸಿದ ನಂತರ ಎರಡು ಬಸ್‌ಗಳು ತ್ರಿಶೂಲಿ ನದಿಗೆ ಬಿದ್ದಿವೆ.
- ಬಸ್‌ಗಳು ಬಿರ್‌ಗುಂಜ್‌ನಿಂದ ಕಠ್ಮಂಡು ಮತ್ತು ಕಠ್ಮಂಡುವಿನಿಂದ ಗೌರ್‌ಗೆ ಪ್ರಯಾಣಿಸುತ್ತಿದ್ದವು.
- ಏಂಜೆಲ್ ನೈಟ್ ಬಸ್ ನಲ್ಲಿ 22 ಮಂದಿ ಹಾಗೂ ಗಣಪತಿ ಟ್ರಾವೆಲ್ಸ್ ಬಸ್ ನಲ್ಲಿ 43 ಮಂದಿ ಪ್ರಯಾಣಿಕರಿದ್ದರು.
- ಮುಂಜಾನೆ 3 ಗಂಟೆ ಸುಮಾರಿಗೆ ಭೂಕುಸಿತದ ವೇಳೆ ಈ ಅವಘಡ ಸಂಭವಿಸಿದೆ.
- ಹೆದ್ದಾರಿ ಭದ್ರತೆಯ ಉಸ್ತುವಾರಿ ವಹಿಸಿರುವ ಹೈವೇ ಪೆಟ್ರೋಲಿಂಗ್ ಪೊಲೀಸರ ಪ್ರಕಾರ, ಭಾರೀ ಮಳೆ ಮತ್ತು ಭೂಕುಸಿತದಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದೆ.
- ಸ್ಥಳೀಯ ಆಡಳಿತ ಮತ್ತು ಡೈವಿಂಗ್ ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಸಂಪೂರ್ಣ ಸಜ್ಜಾಗಿವೆ ಆದರೆ ರಸ್ತೆ ಮುಚ್ಚಿದ ಕಾರಣ ರಕ್ಷಣಾ ಕಾರ್ಯಾಚರಣೆ ಇನ್ನೂ ಪ್ರಾರಂಭವಾಗಿಲ್ಲ.
- ಕಠ್ಮಂಡುವಿಗೆ ತೆರಳುತ್ತಿದ್ದ ಬಸ್ಸಿನ ಕ್ಯಾಬಿನ್‌ನಿಂದ ಮೂವರು ಪ್ರಯಾಣಿಕರು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
- ಮೂವರನ್ನು ನಾರಾಯಣಘಟ್ಟ ಆಸ್ಪತ್ರೆಗೆ ದಾಖಲಿಸಲಾಗಿದೆ.
