ಇತ್ತೀಚಿನ ಕೆಲ ವರ್ಷಗಳಲ್ಲಿ ಸಾರ್ವಜನಿಕ ವಲಯದ ಘಟಕಗಳ ಕಂಪನಿಗಳು ಅತ್ಯುತ್ತಮ ಬೆಳವಣಿಗೆ ಹೊಂದಿವೆ. ಹಳೆಯದಾಗಿ ಬಿಳಿ ಆನೆಗಳೆಂದು ಪರಿಗಣಿತವಾಗಿದ್ದ ಸರ್ಕಾರಿ ಸಂಸ್ಥೆಗಳು ಈಗ ಭರ್ಜರಿ ಲಾಭದ ಕುದುರೆಗಳಾಗಿವೆ. ಷೇರು ಮಾರುಕಟ್ಟೆಯಲ್ಲೂ ಅವು ಲಾಭದ ಕುದುರೆಗಳಾಗಿವೆ.
BulletsIn
- ಎಚ್ ಎ ಎಲ್, ಬಿಎಚ್ಇಎಲ್, ಎಸ್ ಬಿ ಐ ಮೊದಲಾದ ಸ್ಟಾಕ್ ಗಳ ಮೌಲ್ಯ ಹೆಚ್ಚಿದೆ.
- ಪಿ ಎಸ್ ಇ ವಲಯದ ಷೇರುಗಳಲ್ಲಿ ಮ್ಯೂಚುವಲ್ ಫಂಡ್, ಇಟಿಎಫ್ ಗಳು ಭರ್ಜರಿಯಾಗಿ ಬೆಳೆದಿವೆ.
- ಮ್ಯೂಚುವಲ್ ಫಂಡ್ ಮತ್ತು ಇಟಿಎಫ್ ವರ್ಷದಲ್ಲಿ ಸರಾಸರಿಯಾಗಿ ಶೇ. 100ರಷ್ಟು ಬೆಳೆದಿವೆ.
- ಎರಡು ಫಂಡ್ ಗಳಲ್ಲಿ ಒಂದು ವರ್ಷದಲ್ಲಿ ಶೇ. 100ಕ್ಕಿಂತಲೂ ಹೆಚ್ಚು ರಿಟರ್ನ್ ಸಾಧಿಸಿದೆ.
- ಸಿಪಿಎಸ್ಇ ಇಟಿಎಫ್ ಫಂಡ್ ವರ್ಷದಲ್ಲಿ ಶೇ. 116.41ರಷ್ಟು ರಿಟರ್ನ್ ಕೊಟ್ಟಿದೆ.
- ಎಸ್ ಬಿ ಐನ ಪಿಎಸ್ ಯು ಫಂಡ್ ಕೂಡ ಶೇ. 101.56ರಷ್ಟು ವಾರ್ಷಿಕ ಬೆಳವಣಿಗೆ ಹೊಂದಿದೆ.
- ಇನ್ವೆಸ್ಕೋ ಇಂಡಿಯಾ ಪಿಎಸ್ಯು ಈಕ್ವಿಟಿ ಫಂಡ್ ಮತ್ತು ಆದಿತ್ಯ ಬಿರ್ಲಾ ಎಸ್ ಎಲ್ ಪಿಎಸ್ಯು ಈಕ್ವಿಟಿ ಫಂಡ್ ಶೇ. 95ರಷ್ಟು ಹೆಚ್ಚಿನ ರಿಟರ್ನ್ ಸಾಧಿಸಿದೆ.
