ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕವಾಗಿ ಆರಂಭವಾಗಿದೆ. ಹಲವೆಡೆ ವ್ಯಾಪಕ ಮಳೆಯಾಗುತ್ತಿದ್ದು, ನದಿಗಳಿಗೆ ಜೀವ ಬಂತು. ಮಳೆಯಾಗುವುದರಿಂದ ಕೆಲವರು ಖುಷಿಪಟ್ಟರೆ, ಇನ್ನು ಕೆಲವರು ಸಂಕಷ್ಟ ಅನುಭವಿಸುತ್ತಿದ್ದಾರೆ.
BulletsIn
- ವಿಜಯನಗರ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ.
- ಹೊಸಪೇಟೆ, ಹಂಪಿ, ಕಮಲಾಪೂರ, ಚಿತ್ತವಾಡಗಿ, ಶಾನಭಾಗ ಸರ್ಕಲ್ ಭಾಗಗಳಲ್ಲಿ ಉತ್ತಮ ಮಳೆ.
- ಸತತ ಮಳೆಯಿಂದ ರೈತರು ಖುಷಿಪಟ್ಟರೆ, ಪಾದಚಾರಿಗಳು ಮತ್ತು ವಾಹನ ಸವಾರರು ಪರದಾಡುತ್ತಿದ್ದಾರೆ.
- ಚಿಕ್ಕಮಗಳೂರು ಕಳಸ ತಾಲೂಕಿನ ಹತ್ತಿಕುಡಿಗೆ ಗ್ರಾಮದಲ್ಲಿ ನಿರಂತರ ಮಳೆ.
- ಬೃಹತ್ ಮರ ಬಿದ್ದು, ರತ್ನಮ್ಮ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡರು.
- ಕಳಸ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ರತ್ನಮ್ಮನನ್ನು ಮಂಗಳೂರಿಗೆ ರವಾನಿಸಿದರು.
- ಬಳ್ಳಾರಿ ನಗರದಲ್ಲಿ ಮಳೆಯಾದ್ದರಿಂದ ಪಾದಚಾರಿ ಮತ್ತು ವಾಹನ ಸವಾರರಿಗೆ ಸಮಸ್ಯೆ.
- ಮಳೆ ನೀರು ನಗರದಲ್ಲಿ ನದಿಯಂತೆ ಹರಿಯುತ್ತಿದೆ.
- ಬಳ್ಳಾರಿಯ ಶಾಲಾ ಆವರಣಗಳಿಗೆ ಮಳೆ ನೀರು ನುಗ್ಗಿ ವಿದ್ಯಾರ್ಥಿಗಳು ಪರದಾಡಿದರು.
- ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿಯೂ ಮಳೆಯಾಗಿದ್ದು, ಬಿತ್ತನೆ ಮಾಡಿದ ರೈತರಿಗೆ ಸಂತೋಷ ತಂದಿದೆ.
