ನವದೆಹಲಿ : ಆ್ಯಂಕರ್:ದೇಶದಲ್ಲಿಂದು 3ನೇ ಹಂತದ ಮತದಾನ ಆರಂಭವಾಗಿದೆ. 10 ರಾಜ್ಯಗಳು, 2 ಕೇಂದ್ರಾಳಿತ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿಯ ಚುನಾವಣೆ ಮೇ25ಕ್ಕೆ ಮುಂದೂಡಲಾಗಿದೆ.
ಅಚ್ಚರಿ ಸಂಗತಿ ಎಂದರೆ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ 120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿ ಸ್ಪರ್ಧಿಸುತ್ತಿದ್ದಾರೆ. ಅಂದಹಾಗೆಯೇ ಗುಜರಾತ್ ನ 26 ಕ್ಷೇತ್ರದಲ್ಲಿ ಇಂದು ಮತದಾನ ನಡೆದರೆ, ಕರ್ನಾಟಕದ 14, ಮಹಾರಾಷ್ಟ್ರದ 11, ಉತ್ತರ ಪ್ರದೇಶ 10, ಮಧ್ಯಪ್ರದೇಶ 8, ಛತ್ತೀಸ್ಗಢ 7, ಬಿಹಾರ 5, ಅಸ್ಸಾಂ 4, ಪಶ್ಚಿಮ ಬಂಗಾಳ 4, ಗೋವಾ 2 ಮತ್ತು ದಾದ್ರಾ, ನಗರ್ ಹಾವೆಲಿ ಮತ್ತು ದಿಯು ದಾಮನ್ ನಲ್ಲಿ 2 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ.ದೇಶದ ಮೂರನೇ ಹಂತದ ಮತದಾನದಲ್ಲಿ ದಿಗ್ಗಜರು ಸ್ಪರ್ಧಿಸುತ್ತಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ನತ್ತು ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ ಸ್ಪರ್ಧಿಸುತ್ತಿದ್ದಾರೆ. ಇದಲ್ಲದೆ, ಶರದ್ ಪವಾರ್ ಮಗಳು ಸುಪ್ರಿಯಾ ಸುಳೆ, ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಈ ಬಾರಿ ಚುನಾವಣೆಯಲ್ಲಿ ಪೈಪೋಟಿ ನೀಡುತ್ತಿದ್ದಾರೆ.
ಇನ್ನು ಸಮಾಜವಾದಿ ಪಕ್ಷದ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್, ಮಾಜಿ ಸಂಸದ ಅಕ್ಷಯ್ ಯಾದವ್, ರಾಮ್ ಗೋಪಾಲ್ ಯಾದವ್ ಪುತ್ರ ಆದಿತ್ಯ ಯಾದವ್, ಶಿಪಪಾಲ್ ಸಿಂಗ್ ಅವರ ಪುತ್ರ ಕೂಡ ಸ್ಫರ್ಧಿಸುತ್ತಿದ್ದಾರೆ.
ಮೇ 13 ರಂದು ಮುಂದಿನ ಹಂತದ ಚುನಾವಣೆ ನಡೆಯಲಿದ್ದು, ಜೂನ್ 1 ರಂದು ಕೊನೆಯ ಹಂತದ ಚುನಾವಣೆ ಮುಗಿದ ನಂತರ ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.
