ನವದೆಹಲಿ, 29 ಏಪ್ರಿಲ್ :ಆ್ಯಂಕರ್:ಶಕ್ತಿ ಸುಸ್ಥಿರ ಇಂಧನ ಫೌಂಡೇಶನ್, ಪರಿಸರ, ಜಲ ಮತ್ತು ಇಂಧನ ಸಂಸ್ಥೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ಭಾರತೀಯ ಕೇಂದ್ರದ ಸಹಯೋಗದೊಂದಿಗೆ ಗಣಿ ಸಚಿವಾಲಯವು ನಿರ್ಣಾಯಕ ಖನಿಜಗಳ ಶೃಂಗಸಭೆ: ಪ್ರಯೋಜನ ಮತ್ತು ಸಂಸ್ಕರಣಾ ಸಾಮರ್ಥ್ಯ ವೃದ್ಧಿಕುರಿತಂತೆ ಇಂದಿನಿಂದ ಎರಡು ದಿನ ಗಳ ಸಭೆಯನ್ನು ನವದೆಹಲಿಯಲ್ಲಿ ಆಯೋಜಿಸಿದೆ.
ನಿರ್ಣಾಯಕ ಖನಿಜಗಳ ಶೃಂಗಸಭೆಯು ಸಹಯೋಗವನ್ನು ಬೆಳೆಸಲು, ಜ್ಞಾನವನ್ನು ಹಂಚಿಕೊಳ್ಳಲು ಮತ್ತು ನಿರ್ಣಾಯಕ ಖನಿಜ ಲಾಭ ಮತ್ತು ಸಂಸ್ಕರಣೆಯ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಹೆಚ್ಚಿಸಲು ರೂಪಿಸಲಾದ ಒಂದು ಪ್ರಮುಖ ಉಪಕ್ರಮವಾಗಿದೆ. ಭಾರತದ ಕ್ಷಿಪ್ರ ಆರ್ಥಿಕ ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯ ಶುದ್ಧ ಇಂಧನ ಗುರಿಗಳ ಹಿನ್ನೆಲೆಯಲ್ಲಿ ಶೃಂಗಸಭೆಯನ್ನು ಆಯೋಜಿಸಲಾಗಿದೆ, ಇದು ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು ಮತ್ತು ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಪ್ರಮುಖ ತಂತ್ರಜ್ಞಾನಗಳಿಗೆ ಅಗತ್ಯವಾದ ನಿರ್ಣಾಯಕ ಕಚ್ಚಾ ವಸ್ತುಗಳ ದೇಶೀಯ ಪೂರೈಕೆಯನ್ನು ಖಾತ್ರಿಪಡಿಸುವ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ.
