ಕುಡತಿನಿ
ಆ್ಯಂಕರ್ : ಪಟ್ಟಣಸೆರಗು ಗ್ರಾಮದ ಮದುವೆ ದಿಬ್ಬಣದ ಲಾರಿ ಚಾಲಕ ಕುಡಿದ ಮತ್ತಿನಲ್ಲಿ ಲಾರಿಯನ್ನು ಚಾಲನೆ ಮಾಡಿದ ಕಾರಣ ಏಳುಬೆಂಚಿ ಗ್ರಾಮದ ಬಳಿ ಮದುವೆ ದಿಬ್ಬಣದ ಲಾರಿ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪಟ್ಟಣಸೆರಗು ಗ್ರಾಮದ ಭಾಗ್ಯಮ್ಮ (44), ಮಾರಮ್ಮ (45) ಮತ್ತೋರ್ವರ ಹೆಸರು ತಿಳಿದು ಬಂದಿಲ್ಲ.
ಅಪಘಾತದಲ್ಲಿ ಐವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ನ ಟ್ರಾಮಾ ಕೇರ್ ಸೆಂಟರ್ಗೆ ದಾಖಲು ಮಾಡಲಾಗಿದೆ. ಕುಡತಿನಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
