ನವದೆಹಲಿ, ಆ್ಯಂಕರ್:ಪ್ರಧಾನ ಮಂತ್ರಿ ಮತ್ತು ಬಿಜೆಪಿ ಹಿರಿಯ ಮುಖಂಡ ನರೇಂದ್ರ ಮೋದಿ ಇಂದು ಉತ್ತರಪ್ರದೇಶದ ಅಲಿಗಢ್ ನಲ್ಲಿ ಚುನಾವಣಾ ರಾಲಿ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಇದೇ ತಿಂಗಳ ೨೬ ರಂದು ಅಲಿಗಢ್ ಸಂಸದೀಯ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಈ ಸ್ಥಾನಕ್ಕಾಗಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿಯಿಂದ ಸತೀಶ್ ಗೌತಮ್, ಸಮಾಜವಾದಿ ಪಕ್ಷದ ಚೌಧರಿ ಬ್ರಿಜೇಂದ್ರ ಸಿಂಗ್, ಮತ್ತು ಬಹುಜನ ಸಮಾಜಪಕ್ಷದ ಹಿತೇಂದ್ರ ಕುಮಾರ್ ಕಣದಲ್ಲಿದ್ದಾರೆ.
