ದಿಮಾಪುರ, ಆ್ಯಂಕರ್:ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಗಾಲ್ಯಾಂಡ್ ಗೆ ಭೇಟಿ ನೀಡಿ, ದಿಮಾಪುರದಲ್ಲಿಂದು ನಡೆಯಲಿರುವ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ. ನಾಗಾಲ್ಯಾಂಡ್, ಮಣಿಪುರ, ಸಿಕ್ಕಿಂ ಮತ್ತು ತ್ರಿಪುರಾ ರಾಜ್ಯಗಳ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ಗಿರೀಶ್ ಚೋಡಂಕರ್ ಈ ಕುರಿತು ಮಾಹಿತಿ ನೀಡದ್ದಾರೆ.
ಕೇಂದ್ರದಲ್ಲಿ ಈ ಬಾರಿ ಐ ಎನ್ ಡಿ ಐಎ ಮೈತ್ರಿಕೂಟ ಸರ್ಕಾರ ರಚಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನಕಲಿ ಭರವಸೆಗಳನ್ನು ಜನತೆ ನಂಬದಿರುವುದರಿಂದ ದೇಶದ ಮನಸ್ಥಿತಿ ಬದಲಾಗುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
