ಬೆಂಗಳೂರು, 14 ಏಪ್ರಿಲ್ : ಆ್ಯಂಕರ್:ದಿನದಿಂದ ದಿನಕ್ಕೆ ಏರುತ್ತಿದ್ದ ಬಿಸಿಲಿನ ತಾಪಮಾನಕ್ಕೆ ಜನ ರೋಸಿ ಹೋಗಿದ್ದರು. ಈ ಬಿರುಬಿಸಿಲಿನ ಶಾಖಕ್ಕೆ ಜನ ಹೈರಾಣಾಗಿರಬೇಕಾದ್ರೇನೇ ವರುಣ ನಾಲ್ಕೈದು ದಿನಗಳಿಂದ ರಾಜ್ಯದ ನಾನಾ ಕಡೆ ಧೋ ಅಂತ ಸುರಿಯುತ್ತಿದ್ದಾನೆ.
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದ ಹಲವೆಡೆ ಮಳೆ ಸುರಿದಿದ್ದು, ಬಿರುಬೇಸಿಗೆಯಿಂದ ಕಾದ ಕಾವಲಿಯಂತಾಗಿದ್ದ ಭೂಮಿ ತಂಪೆರೆದಿದೆ. ಮಳೆ ಜೊತೆಗೆ ಗುಡುಗು ಸಿಡಿಲು ಕೂಡ ಸಂಭವಿಸಿದೆ. ಎನ್.ಆರ್ ಪುರ ತಾಲೂಕಿನ ಅರಳಿಕೊಪ್ಪದ 48 ವರ್ಷದ ರೈತ ಶಂಕರ್ ತೋಟಕ್ಕೆ ಹೋಗಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇತ್ತ ಬಯಲು ಭಾಗದ ತರೀಕೆರೆ ಪಟ್ಟಣದಲ್ಲಿ ಉತ್ತಮ ಮಳೆಯಾಗಿದ್ದು ರಸ್ತೆಗಳ ಮೇಲೆ 2-3 ಅಡಿಗಳಷ್ಟು ನೀರು ಹರಿದಿದೆ.ಯಾದಗಿರಿ ಜಿಲ್ಲೆಯ ಅಬ್ಬರದ ಮಳೆ ಸುರಿದಿದೆ. ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ನಿನ್ನೆ ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಮಳೆಯಿಂದ ರಕ್ಷಣೆಗೆ ಅಂತ ಮರದ ಕೆಳಗೆ ಯುವಕ ಮಂಜುನಾಥ್ ನಿಂತಿದ್ದ. ಇದೇ ವೇಳೆ ಸಿಡಿಲು ಬಡಿದು ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸಿಡಿಲ ಅಬ್ಬರ ಜೋರಾಗಿದೆ. ಇನ್ನೂ ಸಿಡಿಲ ಬಡಿತಕ್ಕೆ ಲಾಳಸಂಗಿ ಗ್ರಾಮದ ರೈತ ಕಾಸಿಮ್ ಬಾಗವಾನ್ ಎಂಬುವವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ.ಕೊಪ್ಪಳದ ಹಲವಡೆ ಗುಡುಗು-ಸಿಡಿಲು ಸಹಿತ ಮಳೆರಾಯ ಅಬ್ಬರ ಜೋರಾಗಿದೆ. ಸಿಡಿಲು ಬಡಿತದಿಂದಾಗಿ ಕನಕಗಿರಿ ತಾಲೂಕಿನ ನವಲಿ ತಾಂಡದಲ್ಲಿರುವ ದುರ್ಗಾದೇವಿಯ ದೇವಸ್ಥಾನದ ಗೋಪುರ ಕುಸಿದಿದೆ. ಸಿಡಿಲಿನ ಹೊಡೆತಕ್ಕೆ ಗೋಪುರದ ಮೇಲ್ಬಾಗ ಸಂಪೂರ್ಣ ಬಿರುಕು ಬಿಟ್ಟು ಕುಸಿತಕಂಡಿದೆ. ಗೋಪುರದ ಕುಸಿತದಿಂದಾಗಿ ಭಕ್ತರು ಆತಂಕದಲ್ಲಿದ್ದಾರೆ.
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ ಜೋರಾಗಿದೆ. ಕಾದು ಕೆಂಡದಾಂತದ ಭೂಮಿಗೆ ಸುಮಾರು ಅರ್ಧ ಗಂಟೆಗಳ ಕಾಲ ಮಳೆರಾಯ ತಾಂಡವವಾಡಿ ತಂಪೆರೆದಿದ್ದಾನೆ. ಮಳೆಯಿಂದ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿದೆ.
