ಬೆಂಗಳೂರು, 6 ಏಪ್ರಿಲ್ಆ್ಯಂ ಕರ್ : ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆಯಿದೆ ಅಂತ ಮನೆ ಕಡೆ ಹೊಗಲು ಸಜ್ಜಾದವರಿಗೆ ಖಾಸಗಿ ಬಸ್ ದರ ( ಏರಿಕೆ ಶಾಕ್ ಎದುರಾಗಿದೆ. ಯುಗಾದಿ ರಜೆ ಬೆಲ್ಲವಾದರೆ ಖಾಸಗಿ ಬಸ್ಗಳ ಪ್ರಯಾಣದ ದರ ಏರಿಕೆ ಪ್ರಯಾಣಿಕರಿಗೆ ಬೇವು ಆಗಿದೆ.
ಏಪ್ರಿಲ್ 7 ರಂದು ಭಾನುವಾರ, 9 ರಂದು ಮಂಗಳವಾರ ಯುಗಾದಿ ಬರುತ್ತೆ. ಹೀಗಾಗಿ ಸೋಮವಾರ ರಜೆ ಹಾಕಿ ನಾಳೆಯೇ ಊರಿಗೆ ತೆರಳಲು ಜನರ ಪ್ಲಾನ್ ಮಾಡಿದ್ದಾರೆ. ಇನ್ನೂ ಕೆಲವರು ಇಂದು (ಏ.06) ಆಫೀಸ್ಗೆ ರಜೆ ಹಾಕಿ ಬೆಂಗಳೂರಿನಿಂದ ಹೊರಟಿದ್ದಾರೆ. ಅಲ್ಲದೆ ಯುಗಾದಿ ರಜೆ ಒಂದು ದಿನ ಬಿಟ್ಟು ಗುರುವಾರ ರಂಜಾನ್ ರಜೆ ಬರುತ್ತೆ. ಅಲ್ಲದೆ 13 ರಂದು ಎರಡನೇ ಶನಿವಾರ ರಜೆ ಹಾಗೂ 14 ರಂದು ಭಾನುವಾರ ರಜೆ ಇದೆ. ಏಪ್ರಿಲ್ 7 ರಿಂದ ಏಫ್ರಿಲ್ 14ರ ವರೆಗೆ ಬರೊಬ್ಬರಿ 5 ರಜೆಗಳು ಇವೆ. ಹೀಗಾಗಿ ಕೆಲವರು ನಾಳೆಯಿಂದ ವಾರಪೂರ್ತಿ ಆಫೀಸ್ಗೆ ರಜೆ ಹಾಕಲು ಪ್ಲಾನ್ ಮಾಡಿಕೊಂಡು ಬೆಂಗಳೂರು ಬಿಟ್ಟು ಊರಿಗೆ ಹೊರಡುತ್ತಿದ್ದಾರೆ.
ಅಲ್ಲದೆ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಶುರುವಾದ ಕಾರಣ ಮಕ್ಕಳ ಜೊತೆ ಪ್ರವಾಸಕ್ಕೆ ಅಥವಾ ತಮ್ಮ ತಮ್ಮ ಊರಿಗೆ ತೆರಳಲು ಪೋಷಕರು ಯೋಚಿಸಿ, ಬಸ್ ಟಿಕೆಟ್ ಬುಕ್ ಮಾಡಲು ಮುಂದಾದರೆ ದರ ಏರಿಕೆಯ ಶಾಕ್ ನೀಡಿದೆ. ಖಾಸಗಿ ಬಸ್ ಮಾಲೀಕರು 2-3 ಪಟ್ಟು ದರ ಏರಿಕೆ ಮಾಡಿದ್ದಾರೆ.
