ನವದೆಹಲಿ, 6 ಏಪ್ರಿಲ್
1980ರ ಏಪ್ರಿಲ್ 6ರಂದು ಸ್ಥಾಪನೆಗೊಂಡ ಬಿಜೆಪಿ ಇಂದು ತನ್ನ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಪ್ರತಿ ವರ್ಷ ಏಪ್ರಿಲ್ 6ರಂದು ಸಂಸ್ಥಾಪನಾ ದಿನವನ್ನು ಆಚರಿಸುವ ಪಕ್ಷದ ಕಾರ್ಯಕರ್ತರು ಹಾಗೂ ಸದಸ್ಯರು, ಬಿಜೆಪಿಯ ಮೌಲ್ಯಗಳು, ತತ್ವಗಳು ಮತ್ತು ಕ್ರಾಂತಿಕಾರಿ ಸಾಧನೆಗಳ ಕುರಿತು ಚರ್ಚಿಸಲು ಒಟ್ಟಾಗಿ ಸಭೆ ಸೇರುತ್ತಾರೆ.
ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಥಾಪನೆಗೊಂಡು ಇಂದಿಗೆ 44 ವರ್ಷಗಳು. 1980ರ ಏಪ್ರಿಲ್ 6ರಂದು ಸ್ಥಾಪನೆಗೊಂಡ ಬಿಜೆಪಿ ಇಂದು ತನ್ನ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಪ್ರತಿ ವರ್ಷ ಏಪ್ರಿಲ್ 6ರಂದು ಸಂಸ್ಥಾಪನಾ ದಿನವನ್ನು ಆಚರಿಸುವ ಪಕ್ಷದ ಕಾರ್ಯಕರ್ತರು ಹಾಗೂ ಸದಸ್ಯರು, ಬಿಜೆಪಿಯ ಮೌಲ್ಯಗಳು, ತತ್ವಗಳು ಮತ್ತು ಕ್ರಾಂತಿಕಾರಿ ಸಾಧನೆಗಳ ಕುರಿತು ಚರ್ಚಿಸಲು ಒಟ್ಟಾಗಿ ಸಭೆ ಸೇರುತ್ತಾರೆ.
ಬಿಜೆಪಿಯ ಉದಯ: ಭಾರತೀಯ ಜನಸಂಘದ ಆಳವಾದ ಬೇರುಗಳ ಬಲದಿಂದ 1980ರ ಏಪ್ರಿಲ್ 6ರಂದು ಉದಯಗೊಂಡ ಭಾರತೀಯ ಜನತಾ ಪಕ್ಷವು, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಒಂದು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ. ಪಕ್ಷ ಸ್ಥಾಪನೆಗೊಂಡ ಆರಂಭದಿಂದಲೂ, ಅದಾಗಲೇ ಪ್ರಬಲವಾಗಿ ತನ್ನ ಪಾರುಪತ್ಯ ಸಾಧಿಸಿದ್ದ ಕಾಂಗ್ರೆಸ್ಗೆ ಸವಾಲಾಗಿ ಅಸಾಧಾರಣ ರಾಜಕೀಯ ಪಕ್ಷವಾಗಿ ಇಂದು ಬಿಜೆಪಿ ಬೆಳೆದು ನಿಂತಿದೆ.
ಹಿಂ
