ಬೆಂಗಳೂರು, :ಆ್ಯಂಕರ್ :
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಐಪಿಎಲ್ ಟಿ-೨೦ ಕ್ರಿಕೆಟ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ ೨೮ ರನ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ, ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿದೆ. ೧೮೨ ರನ್ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ಎರಡು ಎಸೆತಗಳು ಬಾಕಿ ಇರುವಂತೆಯೇ ತನ್ನೆಲ್ಲಾ ವಿಕೆಟ್ ನಷ್ಟಕ್ಕೆ ೧೫೩ ರನ್ ಗಳಿಗೆ ಸೀಮಿತಗೊಂಡಿತು. ಹೀಗಾಗಿ ಮೂರನೇ ಸೋಲಿಗೆ ಬೆಂಗಳೂರು ತಂಡ ಗುರಿಯಾಯಿತು. ಲಖನೌ ತಂಡದ ಪರ ೧೪ ರನ್ ನೀಡಿ ೩ ವಿಕೆಟ್ ಪಡೆದ ಮಯಂಕ್ ಯಾದವ್ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು. ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ ಲಖನೌ ೨೦ ಓವರ್ ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೮೧ ರನ್ ಕಲೆಹಾಕಿತು. ಲಖನೌ ಪರ ಕ್ವಿಂಟನ್ ಡಿಕಾಕ್ ಮತ್ತು ನಿಕೋಲಸ್ ಪೂರನ್ ಕ್ರಮವಾಗಿ ೮೧ ಮತ್ತು ೪೦ ರನ್ ಗಳಿಸಿದರು. ವಿಶಾಖಪಟ್ಟಣದಲ್ಲಿ ಇಂದು ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಎದುರಾಗಲಿವೆ. ಪಂದ್ಯ ರಾತ್ರಿ ೭.೩೦ಕ್ಕೆ ಆರಂಭವಾಗಲಿದೆ.
