ತುಮಕೂರು,
ಸಿದ್ದಗಂಗಾ ಮಠದ ಶತಾಯುಷಿ ಶಿವೈಕ್ಯ ಶಿವಕುಮಾರ ಶ್ರೀಗಳ 117ನೇ ಜಯಂತೋತ್ಸವ ಆಚರಣೆಗೆ ಸಿದ್ದಗಂಗಾ ಮಠ ಸಿದ್ದವಾಗಿದೆ. ಇಂದು ಬೆಳಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಶ್ರೀಗಳ ಜಯಂತೋತ್ಸವದ ಹಿನ್ನೆಲೆ ಮಠಕ್ಕ ಭಕ್ತ ಸಾಗರವೇ ಹರಿದು ಬರುತ್ತಿದೆ.
ಕಲ್ಪತರು ನಾಡಿನ ಸುಪ್ರಸಿದ್ಧ ಪುಣ್ಯ ಕ್ಷೇತ್ರ ಸಿದ್ದಗಂಗಾ ಮಠದಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ. ಈ ಸಂಭ್ರಮಕ್ಕೆ ಕಾರಣ ನಡೆದಾಡುವ ದೇವರು, ಶಿವೈಕ್ಯ ಡಾ.ಶ್ರೀ ಶಿವಕುಮಾರ ಶ್ರೀಗಳ ಜಯಂತೋತ್ಸವ ಹಾಗೂ ಗುರುವಂದನ ಕಾರ್ಯಕ್ರಮ. ಇದು ಶ್ರೀ ಶಿವಕುಮಾರ ಸ್ವಾಮೀಜಿಗಳಿಲ್ಲದೇ ಶ್ರೀಮಠದಲ್ಲಿ ನಡೆಯುತ್ತಿರುವ ಶ್ರೀಗಳ 6ನೇ ಜನ್ಮದಿನವಾಗಿದೆ.
