ನವದೆಹಲಿ,
ಆ್ಯಂಕರ್ :ಅದಾನಿ ಗ್ರೂಪ್ ಮುಂಬರುವ ಹಣಕಾಸು ವರ್ಷಕ್ಕೆ ಭರ್ಜರಿ ಹೂಡಿಕೆ ಪ್ಲಾನ್ ಹಾಕಿದೆ. ತನ್ನ ವಿವಿಧ ಕಂಪನಿಗಳಲ್ಲಿ 1.2 ಲಕ್ಷ ಕೋಟಿ ರೂಗೂ ಹೆಚ್ಚು ಮೊತ್ತವನ್ನು ಹೂಡಿಕೆ ಮಾಡಲು ಯೋಜಿಸಿದೆ ಎಂದು ಹಿಂದೂಸ್ತಾನ್ ಸಮಾಚಾರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಂದರು, ಇಂದನ, ವಿಮಾನ ನಿಲ್ದಾಣ, ಸಿಮೆಂಟ್ ಮತ್ತು ಮೀಡಿಯಾ ಬಿಸಿನೆಸ್ ಇರುವ ಅದಾನಿ ಗ್ರೂಪ್ನ ವಿವಿಧ ಪೋರ್ಟ್ಫೋಲಿಯೋ ಕಂಪನಿಗಳಲ್ಲಿ ಈ ಹೂಡಿಕೆ ನಡೆಯಲಿದೆ. ಇದರಲ್ಲಿ ಹೆಚ್ಚಿನ ಹೂಡಿಕೆ ಪರಿಸರಪೂರಕ ಇಂಧನ ಕ್ಷೇತ್ರಗಳಿಗೆ ವ್ಯಯವಾಗಲಿದೆ. ವರದಿ ಪ್ರಕಾರ ಅದಾನಿ ಸಂಸ್ಥೆ ಯೋಜಿಸಿರುವ ಬಂಡವಾಳ ವೆಚ್ಚದಲ್ಲಿ ಮರುಬಳಕೆ ಶಕ್ತಿ, ಗ್ರೀನ್ ಹೈಡ್ರೋಜನ್ ಮತ್ತು ಗ್ರೀನ್ ಇವಾಕ್ಯುವೇಶನ್ (ಗ್ರಿಡ್ಗಳಿಗೆ ವಿದ್ಯುತ್ ವಿತರಣೆ) ಇತ್ಯಾದಿ ಅದರ ಪರಿಸರಪೂರಕ ಕ್ಷೇತ್ರಗಳಿಗೆ ಶೇ. 70ರಷ್ಟು ವ್ಯಯವಾಗಲಿದೆ. ಇನ್ನುಳಿದ ಶೇ. 30ರಷ್ಟು ವೆಚ್ಚವನ್ನು ಏರ್ಪೋರ್ಟ್ ಮತ್ತು ಪೋರ್ಟ್ ವ್ಯವಹಾರಗಳಿಗೆ ಮೀಸಲಿಡುವ ಸಾಧ್ಯತೆ ಇದೆ.
