ನವದೆಹಲಿ,
ಆ್ಯಂಕರ್ :ಭಾರತ ಸೆಶೆಲ್ಸ್ ನಡುವಿನ ಜಂಟಿ ಸೇನಾ ಸಮರಾಭ್ಯಾಸ-ಲಮಿತಿಯೆ-೨೦೨೪ ಕಾರ್ಯಕ್ರಮ ಇಂದು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತದ ಸೇನಾಪಡೆಯ ತುಕಡಿಯೊಂದು ನಿನ್ನೆ ಸೆಶೆಲ್ಸ್ಗೆ ಪ್ರಯಾಣ ಬೆಳೆಸಿತು. ಕ್ರಿಯೋಲೆ ಭಾಷೆಯಲ್ಲಿ ಲಮಿತಿಯೆ ಎಂದರೆ ಸ್ನೇಹ ಎಂದು ಅರ್ಥ. ಭಾರತ ಸೆಶೆಲ್ಸ್ಗಳು ೨೦೦೧ ರಿಂದ ಪ್ರತಿ ೨ ವರ್ಷಗಳಿಗೊಮ್ಮೆ ಈ ರೀತಿಯ ತರಬೇತಿ ಕಾರ್ಯಕ್ರಮ ನಡೆಸುತ್ತಿದ್ದು, ಇಂತಹ ಹತ್ತನೇಯ ಸೇನಾ ಕವಾಯತು ಇದಾಗಿದೆ. ಭಾರತೀಯ ಸೇನೆಯ ಗೂರ್ಖಾ ರೈಫಲ್ಸ್ನ ೪೫ ಸಿಬ್ಬಂದಿ ಹಾಗೂ ಸೆಶೆಲ್ಸ್ ನ ರಕ್ಷಣಾಪಡೆಯ ಸಿಬ್ಬಂದಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮ ಈ ತಿಂಗಳ ೨೭ರವರೆಗೆ ನಡೆಯಲಿದೆ. ಈ ಸಮರಾಭ್ಯಾಸ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸೈನಿಕ ಸಂಬಂಧ, ಕೌಶಲ್ಯಗಳ ವಿನಿಮಯಕ್ಕೆ ಒದಗಿರುವ ಅವಕಾಶವೆಂದು ರಕ್ಷಣಾ ಸಚಿವಾಲಯ ತಿಳಿಸಿದೆ
