ಕಲಬುರಗಿ, 17 ಮಾರ್ಚ್:
ರಂಜಾನ್ ಹಿನ್ನೆಲೆಯಲ್ಲಿ ಬಟ್ಟೆ ವ್ಯಾಪಾರ ಮುಗಿಸಿಕೊಂಡು ವಾಪಸ್ ಆಗುವಾಗ ಸ್ವಿಫ್ಟ್ ಹಾಗೂ ಸ್ಕಾರ್ಪಿಯೋ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಶಹಬಾದ್ ತಾಲೂಕಿನ ಭಂಕೂರ ಗ್ರಾಮ ಬಳಿ ನಡೆದಿದೆ.
ಉತ್ತರಪ್ರದೇಶ ಮೂಲದ ಜಾಹೀದ್ ಪಠಾಣ್ (30), ಶಾಕೀರ್ (20) ಮೃತ ದುರ್ದೈವಿಗಳು. ಓರ್ವನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಉತ್ತರಪ್ರದೇಶ ಮೂಲದ ಬಟ್ಟೆ ವ್ಯಾಪಾರಿಗಳಾಗಿದ್ದಾರೆ. ರಂಜಾನ್ ಹಿನ್ನೆಲೆಯಲ್ಲಿ ಬಟ್ಟೆ ವ್ಯಾಪಾರ ಮುಗಿಸಿಕೊಂಡು ಕಲಬುರಗಿಯಿಂದ ಯಾದಗಿರಿಗೆ ಹೋಗುತ್ತಿದ್ದರು. ಈ ವೇಳೆ ಭಂಕೂರ ಗ್ರಾಮ ಬಳಿ ಬರುತ್ತಿದ್ದಂತೆ ಕಲಬುರಗಿ ಕಡೆಗೆ ತೆರಳುತ್ತಿದ್ದ ಸ್ಕಾರ್ಪಿಯೋ ಕಾರು ಮತ್ತು ಸ್ವಿಫ್ಟ್ ಕಾರು ಮಧ್ಯೆ ಭೀಕರವಾದ ಅಪಘಾತ ಸಂಭವಿಸಿದೆ.
