ಬೆಂಗಳೂರು, 17 ಮಾರ್ಚ್ :
ಆ್ಯಂಕರ್ : ಇವತ್ತು ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ 49ನೇ ಹುಟ್ಟುಹಬ್ಬದ ಸಂಭ್ರಮ. ರಾಜ್ಯಾದ್ಯಂತ ಮರೆಯಲಾರದ ಮಾಣಿಕ್ಯನ ನೆನಪು ಮನೆ ಮಾಡಿದೆ. ಮಧ್ಯರಾತ್ರಿಯಿಂದಲೇ ಅಪ್ಪು ಅಭಿಮಾನಿಗಳು ಸೆಲೆಬ್ರೇಷನ್ ಮಾಡುತ್ತಿದ್ದಾರೆ.
ಮಧ್ಯರಾತ್ರಿ ಅಪ್ಪು ಸಮಾಧಿ ಬಳಿ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಸೇರಿದ್ದರಿಂ ನೂಕುನುಗ್ಗಲು ಉಂಟಾಗಿತ್ತು. ಬೆಳಕಿನ ಪಟಾಕಿಗಳ ಸದ್ದು ಕೂಡ ಜೋರಾಗಿತ್ತು. ಅಪ್ಪು ಸಮಾಧಿ ಮುಂದೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಆಗಿದ್ದರಿಂದ ಕಂಟ್ರೋಲ್ ಸಿಗದಿದ್ದಕ್ಕೆ ಪೊಲೀಸರು ಗೇಟ್ ಲಾಕ್ ಮಾಡಿದ್ದರು.ಇಂದು ಬಾನದಾರಿಯಲ್ಲಿ ಜಾರಿ ಹೋದ ಮರೆಯಲಾರದ ಮಾಣಿಕ್ಯ. ಅಭಿಮಾನಿಗಳ ಆರಾಧ್ಯದೈವದ ಹುಟ್ಟುಹಬ್ಬ. ಈ ಹಿನ್ನಲ್ಲೆ ಮಧ್ಯರಾತ್ರಿ ಸಾವಿರಾರು ಅಭಿಮಾನಿಗಳು ಸಮಾಧಿಯ ದರ್ಶನ ಪಡೆಯಲು ಬಂದಿದ್ರು. ಅದಲ್ಲದೇ, ಪುನೀತ್ ರಾಜ್ ಕುಮಾರ್ ಸಮಾಧಿಗೆ ನಟ ಯುವರಾಜ್ ಕುಮಾರ್ ಭೇಟಿ ನೀಡಿ ದರ್ಶನ ಪಡೆದ್ರು. ಅಭಿಮಾನಿಗಳು ತಂದಿದ್ದ ಅಪ್ಪು ಪುತ್ಥಳಿಯನ್ನ ಅನಾವರಣ ಮಾಡಿದ್ರು.. ಇಂದು ನಗದೆಲ್ಲೆಡೆ ಅಪ್ಪು ಪುತ್ಥಳೀಯ ತೇರು ಸಂಚಾರ ಮಾಡಲಿದೆ.
