ಆ್ಯಂಕರ್ :
ಸಲ್ಮಾನ್ ಖಾನ್ ದೊಡ್ಡದೊಂದು ಹಿಟ್ ಕೊಟ್ಟು ವರ್ಷಗಳೇ ಆಗಿವೆ. ಸಲ್ಮಾನ್ ರ ಈ ಹಿಂದಿನ ಸಿನಿಮಾ ‘ಟೈಗರ್ 3’ ಸಾಧಾರಣ ಯಶಸ್ಸನ್ನಷ್ಟೆ ಕಂಡಿದೆ. ಶಾರುಖ್ ಖಾನ್ ರೀತಿ ದೊಡ್ಡ ಹಿಟ್ ಸಿನಿಮಾಕ್ಕಾಗಿ ಸಲ್ಮಾನ್ ಖಾನ್ ಕಾತರವಾಗಿದ್ದು, ಇದಕ್ಕಾಗಿ ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕನ ಜೊತೆ ಕೈ ಜೋಡಿಸಿದ್ದಾರೆ. ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಾಯಕನಾಗಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಸಲ್ಮಾನ್ ಖಾನ್ರ ಆಪ್ತ ಗೆಳೆಯ ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡಲಿದ್ದಾರೆ. ಇದು ಭಾರಿ ಬಜೆಟ್ ಸಿನಿಮಾ ಆಗಿರಲಿದೆಯಂತೆ.
‘ಗಜಿನಿ’, ‘ಸ್ಟಾಲಿನ್’, ‘ತುಪ್ಪಾಕಿ’, ‘ಸೆವೆಂತ್ ಸೆನ್ಸ್’, ‘ಸ್ಪೈಡರ್’ ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈಗ ಸಲ್ಮಾನ್ ಖಾನ್ರ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಮುರುಗದಾಸ್ಗೆ ಹಿಂದಿ ಹೊಸದೇನೂ ಅಲ್ಲ. ಈ ಹಿಂದೆ ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಸಿನಿಮಾ ನಿರ್ದೇಶನ ಮಾಡಿದ್ದರು, ಸೊನಾಕ್ಷಿ ಸಿನ್ಹ ನಟಿಸಿದ್ದ ‘ಅಕಿರಾ’ ಸಿನಿಮಾ ಸಹ ನಿರ್ದೇಶನ ಮಾಡಿದ್ದಾರೆ. ಸಲ್ಮಾನ್ ಖಾನ್ ಸಹ, ಮುರುಗದಾಸ್ ನಿರ್ದೇಶನ ಮಾಡಿದ್ದ ‘ಸ್ಟಾಲಿನ್’ ಸಿನಿಮಾವನ್ನು ಹಿಂದಿಯಲ್ಲಿ ‘ಜೈ ಹೋ’ ಹೆಸರಲ್ಲಿ ರೀಮೇಕ್ ಮಾಡಿದ್ದಾರೆ. ಈಗ ಇಬ್ಬರೂ ಒಟ್ಟಿಗೆ ಕೆಲಸ ಮಾಡಲಿದ್ದಾರೆ
