ಮಾಲಿ , 28 ಫೆಬ್ರವರಿ :ಆ್ಯಂಕರ್ :ಬಸ್ ವೊಂದು ಸೇತುವೆಯಿಂದ ಉರುಳಿಬಿದ್ದಿದ್ದು, ಸುಮಾರು 31 ಜನರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಪಶ್ಚಿಮ ಆಫ್ರಿಕಾದ ಕನಿಬಾದಲ್ಲಿ ಈ ಘಟನೆ ನಡೆದಿದೆ.
ಬಸ್ ಅಪಘಾತಕ್ಕೀಡಾಗಿದೆ. ಬುರ್ಕಿನಾ ಫಾಸೊಗೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಸೇತುವೆಯಿಂದ ಉರುಳಿದ ಬಸ್ ನದಿ ನೀರಿಗೆ ಬಿದ್ದಿದೆ.
ಬಸ್ನಲ್ಲಿ ಮಾಲಿಯನ್ನರು ಮತ್ತು ಇತರ ನಾಗರೀಕರು ಪ್ರಯಾಣಿಸುತ್ತಿದ್ದರು. ವಾಹನವನ್ನು ನಿಯಂತ್ರಿಸಲು ಚಾಲಕ ವಿಫಲವಾದ ಕಾರಣ ಬಸ್ ಅಪಘಾತಕ್ಕೀಡಾಗಿದೆ ಎಂದು ಅಲ್ಲಿನ ಸಾರಿಗೆ ಸಚಿವಾಲಯ ತಿಳಿಸಿದೆ.
ಆಫ್ರಿಕಾದ ಬಹುತೇಕನ ರಸ್ತೆಗಳು ಹದಗೆಟ್ಟಿದ್ದು, ಸಾರ್ವಜನಿಕ ವಾಹನಗಳಲ್ಲಿ ಓವರ್ ಲೋಡ್ ಆಗಿ ಪ್ರಯಾಣಿಸುತ್ತಾರೆ. ಇದರಿಂದಾಗಿ ವಾಹನ ನಿಯಂತ್ರಿಸಲಾಗದೆ ಆಗಾಗ ಅಪಘಾತ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ.
