ನವದೆಹಲಿ, 26 ಫೆಬ್ರವರಿ :ಆ್ಯಂಕರ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾಷ್ಟ್ರಪತಿ ಭವನದ ಅಮೃತ್ ಉದ್ಯಾನದಲ್ಲಿ ಒಂದು ದಿನದ ’ಪರ್ಪಲ್ ಫೆಸ್ಟ್’ ಅನ್ನು ಉದ್ಘಾಟಿಸಲಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯು ಇನ್ನು ಆಯೋಜಿಸಿದೆ. ಜನವರಿಯಲ್ಲಿ ಗೋವಾದಲ್ಲಿ ’ಅಂತರರಾಷ್ಟ್ರೀಯ ಪರ್ಪಲ್ ಫೆಸ್ಟ್, ೨೦೨೪’ ಆಯೋಜಿಸಿ ಯಶಸ್ಸು ಕಂಡ ನಂತರ ಪರ್ಪಲ್ ಫೆಸ್ಟ್ ಅನ್ನು ಆಯೋಜಿಸುತ್ತಿದೆ. ಹತ್ತು ಸಾವಿರಕ್ಕೂ ಹೆಚ್ಚು ದಿವ್ಯಾಂಗರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ‘ಪರ್ಪಲ್ ಫೆಸ್ಟ್’ ನಲ್ಲಿ ವಿವಿಧ ಸಂವಾದಾತ್ಮಕ ಮಳಿಗೆಗಳು ಇರಲಿವೆ. ’ಪರ್ಪಲ್ ಫೆಸ್ಟ್’ ನಲ್ಲಿ ಪ್ರಮುಖ ಚಟುವಟಿಕೆಗಳೆಂದರೆ ಅಮೃತ್ ಉದ್ಯಾನ್ ಭೇಟಿ, ಅಂಗವೈಕಲ್ಯಗಳ ಬಗ್ಗೆ ತಿಳಿವಳಿಕೆ ಮೂಡಿಸುವುದು. ಪರ್ಪಲ್ ಕೆಫೆ, ಪರ್ಪಲ್ ಕೆಲಿಡೋಸ್ಕೋಪ್, ಪರ್ಪಲ್ ಲೈವ್ ಅನುಭವ ವಲಯ ಮತ್ತು ಪರ್ಪಲ್ ಸ್ಪೋರ್ಟ್ಸ್ ಇರಲಿದೆ ಎಂದು ತಿಳಿಸಲಾಗಿದೆ.
