ಹುಬ್ಬಳ್ಳಿ ಫೆಬ್ರವರಿ ೨೪
ಆ್ಯಂಕರ್
ದೇವಸ್ಥಾನದ ಹಣವನ್ನು ರಾಜ್ಯ ಸರ್ಕಾರ ಲೂಟಿ ಹೊಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಸರಕಾರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಇದರ ವಿರುದ್ದ ವಿಧಾನ ಸಭೆ, ವಿಧಾನ ಪರಿಷತ್ನಲ್ಲಿ ಶಕ್ತಿಮೀರಿ ಹೋರಾಟ ಮಾಡುವುದಾಗಿ ಹೇಳ್ಳಿದ್ದಾರೆ. ಇನ್ನು ಸಂತೋಷ್ ಲಾಡ್ ಅವರಿಗೆ ಕಾಂಗ್ರೆಸ್ನವರು ಟಾರ್ಗೆಟ್ ಕೊಟ್ಟಿದ್ದಾರೆ
ಮೋದಿ, ಜೋಶಿ ಬೈಯ್ಯಬೇಕು ಅಂತಾ ಟಾರ್ಗೆಟ್ ಕೊಟ್ಟಿದ್ದಾರೆ
ಇಲ್ಲದಿದ್ದರೆ ಲಾಡ್ ಮಂತ್ರಿಗಿರಿ ಹೋಗುತ್ತೆ ಅಂತಾ ಕಾಂಗ್ರೆಸ್ನವರೇ ನನಗೆ ಹೇಳಿದ್ದಾರೆ ಎಂದ ಅವರು
ಲಾಡ್ ಆರೋಪದಲ್ಲಿ ಯಾವುದಕ್ಕಾದರೂ ಗಂಭೀರತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಸರ್ದಾರ್ ಪಟೇಲರು ಮೊದಲು ಆರ್ಎಸ್ಎಸ್ ಬ್ಯಾನ್ ಮಾಡಿದ್ರು, ಸತ್ಯ ಗೊತ್ತಾದಾಗ ಬ್ಯಾನ್ ಹಿಂಪಡೆದ್ರು ಆದರೆ ಅದನ್ನೆ ತಿರುಚಿ ಪ್ರಚಾರ ಪಡೆಯಲು ಲಾಡ ಪ್ರಯತ್ನಿಸುತ್ತಿದ್ದಾರೆ ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ಜೋಶಿ ಹೇಳಿದ್ದಾರೆ.
