ರಾಯಚೂರು, 23 ಫೆಬ್ರವರಿ :
ಆ್ಯಂಕರ್: ನಗರದ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದಲ್ಲಿ . ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕಾರ್ಯಗಾರದಲ್ಲಿ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಹಿನ್ನಲೆಯಲ್ಲಿ ರಾಯಚೂರಿನ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ.ಸಮಿತಿಯಿಂದ ಮತದಾರ ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮತದಾರರ ಸಾಕ್ಷರತಾ ಕ್ಲಬ್ಬಿನ ರಾಯಚೂರು ನೋಡಲ್ ಅಧಿಕಾರಿ ಡಾ. ದಂಡಪ್ಪ ಬಿರಾದಾರ ಮತದಾನದ ಮಹತ್ವವನ್ನು ಕುರಿತು ಮಾತನಾಡುತ್ತಾ . ಪ್ರಜಾಪ್ರಭುತ್ವದಲ್ಲಿ ಈ ಆಡಳಿತವನ್ನು ಬಲಪಡಿಸಲು ಮತದಾನ ಬಹಳ ಮುಖ್ಯವಾದದ್ದು . ಒಂದು ಮತ ದೇಶಕ್ಕೆ ಹಿತ .ನನ್ನ ಮತ .ನನ್ನ ಧ್ವನಿ .ನನ್ನ ಶಕ್ತಿ .ಓಟಿನ ಖದರ್ ಅದು ಮತದಾರರ ಪವರ್. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಮತದಾರರು ಮತದಾನದಿಂದ ಹೊರಗೆ ಉಳಿಯಬಾರದೆಂದು ಹೇಳಿ .ಮತದಾನದ ಪ್ರತಿಜ್ಞಾ.ವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಪಾಂಡೆವಿ ರಾಹುಲ್ ತುಕಾರಮ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ನಿಖಿಲ್. ಬಿ . ಸ್ವೀಪ ಸಮಿತಿಯ ನೋಡಲ್ ಅಧಿಕಾರಿಯಾದ ಡಾ. ವೈ .ಬಿ .ವಾಲ್ಮೀಕಿ ಪ್ರೊಬಷನರಿ ಐ.ಎ.ಎಸ್. ಅಧಿಕಾರಿ .ಸಾಹಿತ್ಯ ಆಲದ ಕಟ್ಟಿ .ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಂದ್ರ ಜಲ್ದಾರ್ . ತರಬೇತಿಯ ತಜ್ಞರಾದ ಮಂಜುನಾಥ್ .ಬಿ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಸಂಗಮೇಶ್ವರ. ಕೌಶಲ್ಯ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಎಸ್. ಯೂಸುಫ್ ಅಲಿ ಹಾಗೂ ವಿವಿಧ ಕಾಲೇಜಿನ ಸಾವಿರ ಹತ್ತಿರದ ವಿದ್ಯಾರ್ಥಿಗಳು ಮತ್ತು ಇನ್ನಿತರರು ಉಪಸಿತರಿದ್ದರು.
ಚುನಾವಣಾ ಜಾಗೃತಿ ಗಾಗಿ ಬಂದ ಚುನಾವಣೆ ಗೀತೆಯನ್ನ ಈ ಸಂದರ್ಭದಲ್ಲಿ ಪ್ರಸ್ತುತ ಪಡಿಸಲಾಯಿತು
