ನವದೆಹಲಿ, 13 ಫೆಬ್ರವರಿ :
ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು, ಯುನಿಟೆಡ್ ಅರೆಬ್ ಎಮಿರೇಟ್ಸ್ ಗೆ ಇಂದಿನಿಂದ ಎರಡು ದಿನಗಳ ಭೇಟಿ ನೀಡಲಿದ್ದಾರೆ. ತಮ್ಮ ಭೇಟಿ ಸಂದರ್ಭದಲ್ಲಿ ಪ್ರಧಾನಿ, ಯುಎಇನ ಅಧ್ಯಕ್ಷ ಶೇಖ್ ಮಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಉಭಯ ದೇಶಗಳ ಧುರೀಣರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ, ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಸಲಿದ್ದಾರೆ. ಎರಡು ದೇಶಗಳ ನಡುವಿನ ಕಾರ್ಯತಂತ್ರ ಸಹಭಾಗಿತ್ವ ಬಲಪಡಿಸುವ ಬಗ್ಗೆಯೂ ಈ ಧುರೀಣರು ಸಮಾಲೋಚನೆ ನಡೆಸುವರು.
ಪ್ರಧಾನಿ ಅವರು, ಅಲ್ಲಿನ ಉಪಾಧ್ಯಕ್ಷ ಶೇಕ್ ಮಹಮ್ಮದ್ ಬಿನ್ ರಷೀದ್ ಅಲ್ ಮಕ್ತುಮ್ ಹಾಗೂ ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸುವರು. ಅವರು ದುಬೈನಲ್ಲಿ ನಡೆಯಲಿರುವ ೨೦೨೪ರ ವಿಶ್ವ ಸರ್ಕಾರಿ ಶೃಂಗಸಭೆಯಲ್ಲಿ ಗೌರವ ಅತಿಥಿಯಾಗಿ ವಿಶೇಷ ಭಾಷಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಅಬುದಾಬಿಯ ಮೊದಲ ಹಿಂದೂ ದೇವಸ್ಥಾನ ಬೊಚ ಸನ್ ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ್ ಸಂಸ್ಥಾ – ಬಾಪ್ಸ್ ಮಂದಿರ ಉದ್ಘಾಟಿಸಲಿದ್ದಾರೆ.
ಪ್ರಧಾನಮಂತ್ರಿಯವರು ಅಬುದಾಬಿಯಲ್ಲಿ ಯುಎಇದಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದೆ.
ಇದು ಪ್ರಧಾನಿ ಅವರು ೨೦೧೫ರ ನಂತರ ಯುಎಇಗೆ ನೀಡುತ್ತಿರುವ ೭ನೇ ಭೇಟಿಯಾಗಿದ್ದು, ಕಳೆದ ೮ ತಿಂಗಳಲ್ಲಿ ನೀಡುತ್ತಿರುವ ೩ನೇ ಭೇಟಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ತಮ್ಮ ಯುಎಇ ಭೇಟಿಯ ನಂತರ ಪ್ರಧಾನಿ ಬುಧವಾರ ಮಧ್ಯಾಹ್ನ ಕತಾರ್ನ ದೋಹಾಕ್ಕೂ ಭೇಟಿ ನೀಡಲಿದ್ದಾರೆ. ಕತಾರ್ನ ಅಮೀರ್ ಶೇಖ್, ತಮೀಮ್ ಬಿನ್ ಹಾಮದ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
