ನವದೆಹಲಿ, 12 ಫೆಬ್ರವರಿ :
ಸಾವರನ್ ಗೋಲ್ಡ್ ಬಾಂಡ್ ನ 2023-24ರ ಸಾಲಿನ ನಾಲ್ಕನೇ ಹಾಗು ಕೊನೆಯ ಸರಣಿಯ ಪ್ಲಾನ್ ಬಿಡುಗಡೆ (ಫೆ. 12) ಬಿಡುಗಡೆ ಆಗಲಿದೆ. ಇತ್ತೀಚಿನ ವರ್ಷಗಳಲ್ಲಿ ಈ ಬಾಂಡ್ ಬಹಳ ಜನಪ್ರಿಯತೆ ಪಡೆದಿದೆ. ಚಿನ್ನದ ಬೆಲೆಗೆ ಅನುಗುಣವಾಗಿ ಇದು ರಿಟರ್ನ್ ಕೊಡುತ್ತದೆ. ಎಂಟು ವರ್ಷಕ್ಕೆ ಮೆಚ್ಯೂರ್ ಆಗುವ ಈ ಗೋಲ್ಡ್ ಬಾಂಡ್ ಬಹಳ ಹೆಚ್ಚಿನ ಮಟ್ಟದಲ್ಲಿ ಲಾಭ ತರುತ್ತದೆ. 2016ರಲ್ಲಿ ಬಿಡುಗಡೆ ಆದ ಸಾವರನ್ ಗೋಲ್ಡ್ ಬಾಂಡ್ನ ಮೊದಲ ಸರಣಿ ಇದೀಗ ಫೆಬ್ರುವರಿ 8ರಂದು ಮೆಚ್ಯೂರಿಟಿ ಆಗಿದೆ. ಶೇ. 13.6ರಷ್ಟು ವಾರ್ಷಿಕ ದರದಲ್ಲಿ ಇದು ಬೆಳೆದಿದೆ. ಎಂಟು ವರ್ಷದಲ್ಲಿ ಹೂಡಿಕೆದಾರರಿಗೆ ಶೇ. 163ರಷ್ಟು ಲಾಭ ಮಾಡಿದೆ.
2016ರ ಫೆಬ್ರುವರಿ 8ರಂದು ಸಾವರನ್ ಗೋಲ್ಡ್ ಬಾಂಡ್ನ ಮೊದಲ ಟ್ರಾಂಚ್ ಬಿಡುಗಡೆ ಆದಾಗ ಒಂದು ಗ್ರಾಮ್ ಚಿನ್ನದ ಬೆಲೆಯಾಗಿ 2,600 ರೂ ನಿಗದಿ ಮಾಡಲಾಗಿತ್ತು. ಮೆಚ್ಯೂರ್ ಆದಾಗ, ಅಂದರೆ ಈಗ ಒಂದು ಗ್ರಾಮ್ ಚಿನ್ನದ ಬೆಲೆ 6,271 ರೂ ಆಗಿದೆ. ಎಂಟು ವರ್ಷದ ಅಂತರದಲ್ಲಿ ಒಂದು ಗ್ರಾಮ್ ಚಿನ್ನದ ಮೌಲ್ಯ 3,671 ರೂನಷ್ಟು ಹೆಚ್ಚಾಗಿದೆ.
ನೀವು 2016ರಲ್ಲಿ 100 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡಿರುತ್ತೀರಿ. ಅಂದರೆ 2,60,000 ರೂ ಹೂಡಿಕೆ ಮಾಡಿರುತ್ತೀರಿ. ಈಗ ನಿಮ್ಮ ಹೂಡಿಕೆ ಮೌಲ್ಯ 6,27,100 ರೂಗೆ ಹೆಚ್ಚಾಗಿರುತ್ತದೆ. ಎರಡು ಪಟ್ಟಿಗಿಂತ ಹೆಚ್ಚೇ ನಿಮಗೆ ಆದಾಯ ಆಗಿದೆ.
