ರಾಯಚೂರು, 11 ಫೆಬ್ರವರಿ:
ಆ್ಯಂಕರ್ : ನಗರದ ಸಂಪೂರ್ಣ ಸ್ವಚ್ಛ ಮತ್ತು ಸುಂದರತೆಗಾಗಿ ನಗರಸಭೆ ನೇತೃತ್ವದಲ್ಲಿ ವಾರಕ್ಕೆ ಒಂದು ವಾರ್ಡಿನಂತೆ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ವಾರ್ಡ್ ನಂಬರ್ 23ರಲ್ಲಿ ಸ್ವಚ್ಛತಾ ಅಭಿಯಾನವನ್ನು ಪರಿಶೀಲಿಸಿ ಪ್ರತಿ ಮನೆ ಮನೆಗೆ ತೆರಳಿ ರಾಯಚೂರು ನಗರ ನಮ್ಮ ಮನೆ ಇದ್ದಂತೆ ನಾವೆಲ್ಲರೂ ಸ್ವಚ್ಛತೆಯಿಂದ ನಗರವನ್ನು ಕಾಪಾಡಬೇಕಾಗಿದೆ. ಕಾರಣ ನಾವೆಲ್ಲರೂ ಸ್ವಯಂ ಪ್ರೇರಿತರಾಗಿ ನಗರಸಭೆಯ ಈ ಸ್ವಚ್ಛತೆಯ ಪ್ರಯತ್ನದ ಜೊತೆಯಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.
ವಾರ್ಡ್ ನ ವಿವಿಧ ಬಡಾವಣೆಗೆ ತೆರಳಿ ಸ್ವಚ್ಚತಾ ಕಾರ್ಯವನ್ನು ಪರಿಶೀಲಿಸಿ ನಂತರ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಮಾಲೋಚನೆ ನಡೆಸಿದರು.
ರಾಯಚೂರು ನಗರವನ್ನು ನಮ್ಮ ಮನೆಯಂತೆ ಕಂಡು ಸ್ವಚ್ಚತೆಯಿಂದ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಸ್ವಚ್ಚತಾ ಕಾರ್ಯಕ್ರಮಕ್ಕೆ ಸ್ವಯಂಪ್ರೇರಿತವಾಗಿ ನಗರಸಭೆಯೊಂದಿಗೆ ಕೈಜೋಡಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರಾಯಚೂರು ನಗರದ ಹಸಿರೀಕರಣದೊಂದಿದೆ ಎಲ್ಲಾ ವಾರ್ಡ್ ಗಳಲ್ಲಿಯೂ ಸ್ವಚ್ಚತೆ ಕಾಪಾಡಬೇಕು ಎಂದು ಪೌರ ಕಾರ್ಮಿಕರಿಗೆ ತಿಳಿಸಿ ಸಾರ್ವಜನಿಕರಿಗೆ ಮನವಿ ಮಾಡಿದರು.
