ರಿಯಾಧ್, 7 ಫೆಬ್ರವರಿ :
ಆ್ಯಂಕರ್ : ೨೦೨೪ರ ವಿಶ್ವ ರಕ್ಷಣಾ ಪ್ರದರ್ಶನಕ್ಕಾಗಿ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಇದೇ ತಿಂಗಳ ೪ ರಿಂದ ಐದು ದಿನಗಳ ರಿಯಾಧ್ ಪ್ರವಾಸದಲ್ಲಿದ್ದಾರೆ.
ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಆಳವಾದ ಸಹಯೋಗಕ್ಕೆ ಇದು ಸಾಕ್ಷಿಯಾಗಿದೆ. ಜತೆಗೆ ಮ್ಯುನಿಷನ್ಸ್ ಇಂಡಿಯಾ ಲಿಮಿಟೆಡ್ ಮತ್ತು ಸ್ಥಳೀಯ ಪಾಲುದಾರರ ನಡುವೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಈ ಭೇಟಿಯು ಮಹತ್ವದ ಮೈಲಿಗಲ್ಲೆನಿಸಿದೆ.
ಕಾರ್ಯಕ್ರಮದ ನೇಪಥ್ಯದಲ್ಲಿ ಅಂಕಿತ ಹಾಕಲಾದ ಈ ತಿಳಿವಳಿಕೆ ಒಪ್ಪಂದವು ರಕ್ಷಣಾ ಸಹಕಾರ, ತಂತ್ರಜ್ಞಾನ ವರ್ಗಾವಣೆ ಮತ್ತು ಜಂಟಿ ಉತ್ಪಾದನಾ ಪ್ರಯತ್ನಗಳನ್ನು ಹೆಚ್ಚಿಸುವ ಪರಸ್ಪರ ಬದ್ಧತೆಯನ್ನು ಸೂಚಿಸುತ್ತದೆ. ಸಚಿವ ಅಜಯ್ ಭಟ್, ಈ ಒಪ್ಪಂದವನ್ನು ಉಭಯ ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಪಾಲುದಾರಿಕೆಗೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದ್ದಾರೆ.
