ಬಕಿಂಗ್ ಹ್ಯಾಮ್, 6 ಫೆಬ್ರವರಿ :
ಆ್ಯಂಕರ್ :
ಬ್ರಿಟನ್ ರಾಜ 3ನೇ ಚಾಲ್ಸ್ಗೆ ಕ್ಯಾನ್ಸರ್ ಕಾಯಿಲೆ ಇರುವುದು ಪತ್ತೆಯಾಗಿದೆ. 75ರ ಹರೆಯದ ಕಿಂಗ್ ಚಾಲ್ಸ್ ಕಳೆದ ತಿಂಗಳು ಅನಾರೋಗ್ಯದ ಕಾರಣ ಆಸ್ಪತ್ರೆ ದಾಖಲಾಗಿದ್ದರು. ಮೂರು ದಿನಗಳ ಕಾಲ ಚಿಕಿತ್ಸೆ ಪಡೆದರು. ಈ ವೇಳೆ ಅವರಿಗೆ ಕ್ಯಾನ್ಸರ್ ಲಕ್ಷಣ ಇರುವುದು ಪರೀಕ್ಷೆ ವೇಳೆ ತಿಳಿದುಬಂದಿದೆ.
ಬಂಕಿಮ್ ಹ್ಯಾಮ್ ಪ್ಯಾಲೇಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಕಿಂಗ್ ಚಾಲ್ಸ್ ಅವರ ಸಾರ್ವಜನಿಕ ಕೆಲಸಗಳನ್ನು ಮುಂದೂಡಲಾಗಿದೆ ಎಂದು ಹೇಳಿದೆ.
ರಾಜ ಚಾಲ್ಸ್ನ ಆರೋಗ್ಯವನ್ನು ಪರೀಕ್ಷಿಸಿದಾಗ ಪ್ರಾಸ್ಟೇಟ್ ಹಿಗ್ಗುವಿಕೆಗು ಗೋಚರಿಸಿದೆ. ಸದ್ಯ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಸಾರ್ವಜನಿಕ ಕೆಲಸಗಳನ್ನು ಮುಂದೂಡಲು ವೈದ್ಯರು ಅವರಿಗೆ ಸಲಹೆ ನೀಡಿದ್ದಾರೆ.
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಈ ವಿಚಾರ ತಿಳಿದು ಟ್ವೀಟ್ ಮಾಡಿದ್ದಾರೆ. ಬ್ರಿಟನ್ ರಾಜ ಚಾಲ್ಸ್ ಬೇಗ ಚೇತರಿಸಿಕೊಳ್ಳಿ. ಇಡೀ ದೇಶ ಅವರಿಗೆ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
