ಮಂಡ್ಯ, 5 ಫೆಬ್ರವರಿ :
ಆ್ಯಂಕರ್ :ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜ ತೆರವು ವಿವಾದ ತಣ್ಣಗಾಗ್ತಿಲ್ಲ. ಹನುಮಧ್ವಜ ತೆರವು ಖಂಡಿಸಿ ಬಜರಂಗದಳ ಮಂಡ್ಯ ಬಂದ್ ಗೆ ಕರೆ ನೀಡಿತ್ತು. ಆದ್ರೆ ಬಜರಂಗದಳದ ಬಂದ್ ಕರೆ ಖಂಡಿಸಿ ಸಮಾನ ಮನಸ್ಕ ವೇದಿಕೆ ಕೂಡ ಫೆ.7ರಂದು ಬಂದ್ಗೆ ಕರೆ ಕೊಟ್ಟಿದೆ. ಎರಡು ದಿನಗಳ ಅಂತರದಲ್ಲಿ ಎರಡೆರಡು ಬಂದ್ ನಡೆಯೋದಕ್ಕಿದೆ. ಬಂದ್ ನಡೆಸದಂತೆ ಶಾಸಕ ಗಣಿಗ ರವಿ ಮನವಿ ಮಾಡಿದ್ದಾರೆ. ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜ ತೆರವುಗೊಳಿಸಿದ್ದು ಭಾರಿ ವಿವಾದಕ್ಕೆ ಕಾರಣ ಆಗಿತ್ತು. ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಪ್ರತಿಭಟನೆಯಿಂದ ಮಂಡ್ಯ ಉದ್ವಿಗ್ನಗೊಂಡಿತ್ತು. ಪರಿಸ್ಥಿತಿ ತಿಳಿಯಾಗುತ್ತಿರುವ ಹೊತ್ತಲ್ಲೇ ಮತ್ತೊಂದು ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ.
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಖಂಡಿಸಿ ಜನವರಿ 28ರಂದು ಪ್ರತಿಭಟನೆ ನಡೆಸಿದ್ದ ಬಿಜೆಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಫೆಬ್ರವರಿ 9ರಂದು ಮಂಡ್ಯ ಬಂದ್ ನಡೆಸ್ತೀವಿ ಅಂತ ಕರೆ ಕೊಟ್ಟಿದ್ದರು. ಆದ್ರೆ ಸಮಾನ ಮನಸ್ಕ ವೇದಿಕೆ ಕಾರ್ಯಕರ್ತರು ಬಜರಂಗದಳದ ಬಂದ್ ಕರೆಯನ್ನು ವಿರೋಧಿಸಿದೆ. ಫೆಬ್ರವರಿ 7ರಂದು ಮತ್ತೊಂದು ಮಂಡ್ಯ ಬಂದ್ಗೆ ಕರೆ ನೀಡಿದೆ. ಆದ್ರೆ ಈ ಎರಡೂ ಬಂದ್ಗೆ ವರ್ತಕರು ಹಾಗೂ ಆಟೋ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ.
