ಹಂಪಿ , 4 ಫೆಬ್ರವರಿ :
ಆ್ಯಂಕರ್ : ಹಂಪಿ ಉತ್ಸವ-2024ರ ಅಂಗವಾಗಿ ಹಂಪಿಯ ಗಾಯಿತ್ರಿ ಪೀಠದಲ್ಲಿ (ಮುಖ್ಯ ವೇದಿಕೆ) ಫೆಬ್ರವರಿ 4ರಂದು ಹಮ್ಮಿಕೊಳ್ಳಲಾಗಿದ್ದ ಸಾಂಸ್ಕøತಿಕ ಕಾರ್ಯಕ್ರಮಗಳು ಆಕರ್ಷಕವಾಗಿ ನಡೆದವು.
ಈ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಹಗರಿಬೊಮ್ಮನಹಳ್ಳಿಯ ಹಳ್ಳಿ ಬ್ಯಾಂಡ್ ನಿಂದ ಸ್ಯಾಕ್ಸೊಫೋನ್ ವಾದನ, ತುಮಕೂರು ಗುಬ್ಬಿಯ ವಿವೇಕಾನಂದ ವಿದ್ಯಾಪೀಠದಿಂದ ಜಾನಪದ ಪ್ರಕಾರಗಳ ಸಂಯೋಜಿತ ನೃತ್ಯ, ಹಂಪಿ ಉತ್ಸವದ ಸಮಾರೊಪ ಸಮಾರಂಭ, ಬೆಂಗಳೂರಿನ ವೈಷ್ಣವಿ ಕೃಪಸ್ವಾಮಿ ಮತ್ತು ತಂಡದವರಿಂದ ಭರತನಾಟ್ಯ, ಬೆಂಗಳೂರಿನ ಚಲನಚಿತ್ರ ನಟರಾದ ರವಿಶಂಕರ್ ಆರ್ಮುಗಂ ರವರಿಂದ ಮನರಂಜನೆ, ಬೆಂಗಳೂರಿನ ಚಲನಚಿತ್ರ ನಟರಾದ ಅಜಯ್ ರಾವ್ ಅವರಿಂದ ನೃತ್ಯ, ಬೆಂಗಳೂರಿನ ಚಲನಚಿತ್ರ ನಟರಾದ ನೆನಪಿರಲಿ ಪ್ರೇಮ್ ಅವರಿಂದ ಗಾಯನ, ಬೆಂಗಳೂರಿನ ಚಲನಚಿತ್ರ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ನಮೃತ ಗೌಡರವರಿಂದ ನೃತ್ಯ, ಬೆಂಗಳೂರಿನ ಚಲನಚಿತ್ರ ನಟಿಯಾದ ನಿಮಿಕಾ ರತ್ನಾಕರ್ ಅವರಿಂದ ಹಾಡು ಮತ್ತು ನೃತ್ಯ, ಬೆಂಗಳೂರಿ ಚಲನಚಿತ್ರ ನಟಿಯಾದ ನಿಶ್ವಿಕಾ ನಾಯ್ಡು ರವರಿಂದ ನೃತ್ಯ, ಬೆಂಗಳೂರಿನ ಚಲನಚಿತ್ರ ನಟರಾದ ಜಾಹಿದ್ ಅಹ್ಮದ್ ಖಾನ್ ಮತ್ತು ಸತ್ಯನಾರಯಣ ಶೆಟ್ಟಿಯವರಿಂದ ನೃತ್ಯ, ಬೆಂಗಳೂರಿನ ಚಲನಚಿತ್ರ ನಟಿಯಾದ ಸಂಯುಕ್ತ ಹೆಗ್ಡೆಯವರಿಂದ ನೃತ್ಯ, ಬೆಂಗಳೂರಿನ ಚಲನಚಿತ್ರ ನಟರಾದ ದಿಗಂತ್ ಅವರಿಂದ ನೃತ್ಯ ಹಾಗೂ ಬೆಂಗಳೂರಿನ ಸಾದುಕೋಕಿಲ ಮತ್ತು ಗಾಯಕರಾದ ಕಲಾವತಿ, ಸುನೀತಾ, ವಾಣಿ ಹರಿವರನ್, ಉಷಾ, ಮಂಗಳಾ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.
