ನೈರೋಬಿ, 3 ಫೆಬ್ರವರಿ (ಹಿ.ಸ):
ಆ್ಯಂಕರ್ :ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಬೆಳಗಿನ ಜಾವ ಭೀಕರ ಅಗ್ನಿ ಅವಘಡ ಸಂಭವಿಸಿ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. ಭಯಂಕರವಾಗಿ ಅಪ್ಪಳಿಸಿದ ಸದ್ದು ಜನರ ಎದೆ ನಡುಗುವಂತೆ ಮಾಡಿದೆ. ಕಟ್ಟಡ ಮತ್ತು ವಾಹನಗಳು ಸುಟ್ಟು ಕರಕಲಾಗಿದ್ದು, ಭೀಕರ ಘಟನೆಯಲ್ಲಿ 3 ಮಂದಿ ಸಾವನ್ನಪ್ಪಿ 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಭೀಕರ ಅಗ್ನಿ ದುರಂತವೊಂದು ಸಂಭವಿಸಿದೆ. ನೈರೋಬಿಯ ಎಂಬಾಕಸಿ ಎಂಬ ನಗರದಲ್ಲಿರುವ ಜನವಸತಿ ಪ್ರದೇಶದಲ್ಲಿದ್ದ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್ನಲ್ಲಿ ಗ್ಯಾಸ್ ತುಂಬಿದ್ದ ಟ್ರಕ್ವೊಂದು ಸ್ಫೋಟಗೊಂಡಿದೆ. ಟ್ರಕ್ ಬ್ಲಾಸ್ಟ್ನ ಪರಿಣಾಮ ಇಡೀ ಎಂಬಾಕಸಿ ನಗರವೇ ಗಢಗಢ ನಡುಗಿದೆ.
ಅಕ್ಕಪಕ್ಕದಲ್ಲಿದ್ದ ಕಟ್ಟಡಗಳಲ್ಲೂ ಅಗ್ನಿ ನರ್ತನ!
ಭೀಕರ ಬ್ಲಾಸ್ಟ್ನಿಂದಾಗಿ ಸ್ಥಳದಲ್ಲಿದ್ದ ಮೂವರು ಜೀವ ಚೆಲ್ಲಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂಬ ಮಾಹಿತಿ ಲಭ್ಯವಾಗಿದ್ದು, ಸುಮಾರು 300ಕ್ಕೂ ಹೆಚ್ಚು ಮಂದಿ ಭೀಕರವಾಗಿ ಗಾಯಗೊಂಡಿದ್ದಾರೆ. ಜೊತಗೆ ಸ್ಫೋಟದಿಂದಾಗಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಕ್ಕಪಕ್ಕದಲ್ಲಿದ್ದ ಇದ್ದ ಸಣ್ಣ ಅಂಗಡಿ, ಮಳಿಗೆಗಳು ಸೇರಿದಂತೆ ಜನರು ವಾಸಿಸುತ್ತಿದ್ದ ಕಟ್ಟಡಗಳಿಗೂ ಬೆಂಕಿ ಆವರಿಸಿಕೊಂಡಿದ್ದು, ಸ್ಫೋಟದ ತೀವ್ರತೆಯಿಂದಾಗಿ ಬೃಹತ್ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
