ಕೊಪ್ಪಳ, 1 ಫೆಬ್ರವರಿ :
ಆ್ಯಂಕರ್ : ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಶೇ.75 ಕಕಿಂತ ಹೆಚ್ಚಿನ ವಿಕಲಾಂಗತೆ ಹೊಂದಿದ ಅರ್ಹ ಫಲಾನುಭವಿಗಳಿಗೆ ತ್ರಿಚಕ್ರ ಮೋಟಾರ್ ಸೈಕಲ್ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸನ್ 2017-18, 2018-19 ರ ಎಸ್ಎಫ್ಸಿ ಮತ್ತು ಪುರಸಭೆ ನಿಧಿ ಶೇ.5 ವಿಕಲಚೇತನರ ಕಲ್ಯಾಣ ನಿಧಿಯಲ್ಲಿ ಶೇ.75 ಕ್ಕಿಂತ ಹೆಚ್ಚು ವಿಕಲಾಂಗತೆ ಹೊಂದಿರುವ ವಿಕಲಚೇತನರಿಗೆ ತ್ರಿಚಕ್ರ ಮೋಟಾರ್ ಸೈಕಲ್ ನೀಡಲಾಗುತ್ತದೆ. ಆದ್ದರಿಂದ ಶೇ.75 ಕ್ಕಿಂತ ಹೆಚ್ಚಿನ ವಿಕಲಾಂಗತೆ ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿದ ಅರ್ಹ ಫಲಾನುಭವಿಗಳು ವಿಕಲಚೇತನರ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಶನ್ ಕಾರ್ಡ್, ವಕಲಚೇತನರ ಗುರುತಿನ ಚೀಟಿ, ಭಾವಚಿತ್ರಗಳೊಂದಿಗೆ ಫೆಬ್ರವರಿ 17 ರೊಳಗೆ ಪುರಸಭೆ ಕಾರ್ಯಾಯಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.
