ಬೆಂಗಳೂರು, 27 ಜನವರಿ:
ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-2 ಗೆ ಶ್ರೀಲಂಕಾದ ಸ್ಪೋಟಕ ಆಟಗಾರ್ತಿ ಚಮರಿ ಅಥಾಪತ್ತು ಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ಬದಲಿ ಆಟಗಾರ್ತಿಯಾಗಿ ಎಂಬುದು ವಿಶೇಷ. ಅಂದರೆ ಈ ಹಿಂದೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಲಂಕಾ ಆಟಗಾರ್ತಿಯನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.
2024ರ ಹರಾಜಿನಲ್ಲಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಚಮರಿ ಅಥಾಪತ್ತು ಅನ್ಸೋಲ್ಡ್ ಆಗಿದ್ದರು. ಇದಕ್ಕೂ ಮುನ್ನ 2023 ರ ಹರಾಜಿನಲ್ಲೂ ಅವರು ಬಿಕರಿಯಾಗಿರಲಿಲ್ಲ. ಇದೀಗ ಬದಲಿ ಆಟಗಾರ್ತಿಯಾಗಿ ಯುಪಿ ವಾರಿಯರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.2024ರ ಹರಾಜಿನಲ್ಲಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಚಮರಿ ಅಥಾಪತ್ತು ಅನ್ಸೋಲ್ಡ್ ಆಗಿದ್ದರು. ಇದಕ್ಕೂ ಮುನ್ನ 2023 ರ ಹರಾಜಿನಲ್ಲೂ ಅವರು ಬಿಕರಿಯಾಗಿರಲಿಲ್ಲ. ಇದೀಗ ಬದಲಿ ಆಟಗಾರ್ತಿಯಾಗಿ ಯುಪಿ ವಾರಿಯರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
