ಹೈದರಾಬಾದ್, 24 ಜನವರಿ(ಹಿ.ಸ):
ಆ್ಯಂಕರ್ :
ಭಾರತ ಮತ್ತು ಇಂಗ್ಲೆಂಡ್ ಬಹುನಿರೀಕ್ಷಿತ ನಡುವಣ ಟೆಸ್ಟ್ ಸರಣಿಗೆ ವೇದಿಕೆ ಸಿದ್ಧವಾಗಿದೆ. ನಾಳೆಯಿಂದ (ಜ.25) ಶುರುವಾಗಲಿರುವ ಈ ಸರಣಿಯ ಮೊದಲ ಪಂದ್ಯಕ್ಕೆ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇದೀಗ ಮೊದಲ ಪಂದ್ಯದ ಸೆಷನ್ ಅನ್ನು ನಿಗದಿಪಡಿಸಲಾಗಿದ್ದು, ಅದರಂತೆ ಪಂದ್ಯವು ಬೆಳಿಗ್ಗೆ 9.30 ರಿಂದ ಶುರುವಾಗಲಿದೆ.
ಮೊದಲ ಸೆಷನ್ ಬೆಳಿಗ್ಗೆ 9.30 ರಿಂದ 11.30 ರವರೆಗೆ ನಡೆಯಲಿದೆ.
ಎರಡನೇ ಸೆಷನ್ ಮಧ್ಯಾಹ್ನ 12.10 ರಿಂದ ಆರಂಭವಾದರೆ, 2.10 ಕ್ಕೆ ಮುಗಿಯಲಿದೆ.
ಮೂರನೇ ಸೆಷನ್ ಮಧ್ಯಾಹ್ನ 2.30 ರಿಂದ 4.30 ರವರೆಗೆ ನಡೆಯಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಈ ಸರಣಿಯ ಎಲ್ಲಾ ಪಂದ್ಯಗಳನ್ನು ಸ್ಪೋಟ್ಸ್ 18 ಚಾನೆಲ್ನಲ್ಲಿ ನೇರ ಪ್ರಸಾರವಾಗಲಿದೆ.
ಲೈವ್ ಸ್ಟ್ರೀಮಿಂಗ್ ಆ್ಯಪ್ ಯಾವುದು?
ಜಿಯೋ ಸಿನಿಮಾ ಆ್ಯಪ್ನಲ್ಲಿ ಈ ಟೆಸ್ಟ್ ಸಿರೀಸ್ನ ಎಲ್ಲಾ ಮ್ಯಾಚ್ಗಳನ್ನು ಉಚಿತವಾಗಿ ಲೈವ್ ವೀಕ್ಷಿಸಬಹುದು.
ಹಿಂದೂಸ್ತಾನ್ ಸಮಾಚಾರ್
