
ರಾಯಚೂರು, 21 ಜನವರಿ(ಹಿ.ಸ):
ಆ್ಯಂಕರ್: ಶರಣರು ಹೇಳಿದ ತತ್ವ-ಆದರ್ಶ ಎಷ್ಟರ ಮಟ್ಟಿಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಚಿಂತನೆಗಳನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಉಪಕುಲಸಚಿವ ಗುರುರಾಜ.ಎಸ್.ಬಿರಾದಾರ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಯಚೂರು ವಿಶ್ವವಿದ್ಯಾಲಯದಲ್ಲಿ ಅಂಬಿಗರ ಚೌಡಯ್ಯ ಅವರ ಜಯಂತ್ಯೋತ್ಸವನ್ನು ಅವರ ಬಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಆಚರಿಸಲಾಯಿತು. ಅಂಬಿಗರ ಚೌಡಯ್ಯ ಅವರ ವಚನಗಳಿಂದ ನಮಗೆ ಕಂಡುಬರುವ ವಸ್ತು, ಭಾಷೆ, ಶೈಲಿ ಗಮನಿಸಿದರೆ ಅವರೊಬ್ಬ ಕೆಚ್ಚೆದೆಯ, ನೇರ ಪ್ರಕೃತಿಯ, ಗ್ರಾಮ್ಯ ಮನೋಧರ್ಮದ ವಚನಕಾರ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಇತಿಹಾಸ ವಿಭಾಗದ ಕೃಷ್ಣಾ, ಡಾ.ಮಂಜುನಾಥ.ಕೆ, ಕನ್ನಡ ಅಧ್ಯಯನ ವಿಭಾಗದ ಶರಣಪ್ಪ ಚಲುವಾದಿ, ಅರ್ಥಶಾಸ್ತ್ರ ವಿಭಾಗದ ಶಿವರಾಜ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
