ವಾಷಿಂಗ್ಟನ್ ಡಿಸಿ, 21 ಜನವರಿ(ಹಿ.ಸ):
ಆ್ಯಂಕರ್ :
ನಾಳೆ ಅದ್ಧೂರಿಯಾಗಿ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಗೌರವ ಸೂಚಿಸಲು ಅಮೆರಿಕದ ಹಿಂದೂ ಪರಿಷತ್ನವರು 100ಕ್ಕೂ ಹೆಚ್ಚು ಟೆಸ್ಲಾ ಕಾರುಗಳಿಂದ ರಾಮ ಎಂದು ಲೈಟ್ ಶೋ ನಡೆಸಿದೆ. ಶ್ರೀರಾಮನಿಗೆ ಗೌರವ ನೀಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
ಅಮೆರಿಕ ಹಿಂದೂ ಪರಿಷತ್ ಆಹ್ವಾನದಂತೆ 100ಕ್ಕೂ ಅಧಿಕ ಟೆಸ್ಲಾ ಕಾರುಗಳನ್ನು ಹೊಂದಿರುವ ರಾಮ ಭಕ್ತರು ಅಮೆರಿಕದ ಎಂಡಿ, ಫ್ರೆಡ್ರಿಕ್ನಲ್ಲಿರುವ ಶ್ರೀ ಭಕ್ತ ಆಂಜನೇಯ ದೇವಾಲಯಕ್ಕೆ ಆಗಮಿಸಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಮುನ್ನಾದಿನವೇ ಅಮೆರಿಕದ ದೇವಾಲಯದ ಆವರಣದಲ್ಲಿ 100ಕ್ಕೂ ಅಧಿಕ ಟೆಸ್ಲಾ ಕಾರುಗಳನ್ನ ರಾಮ ಹೆಸರಿನಂತೆ ಜೋಡಿಸಿದ್ದಾರೆ. ಬಳಿಕ ಟೆಸ್ಲಾ ಕಾರುಗಳಲ್ಲಿಂದ ಲೈಟ್ ಶೋ ಮಾಡಿದ್ದು ಬಿಳಿ, ಕೆಂಪು ಬಣ್ಣದ ಲೈಟ್ ಬ್ಲಿಂಕ್ ಮಾಡಿರುವುದು ನೋಡುಗರಿಗೆ ಮನಮೋಹಕವಾಗಿ ಕಾಣಿಸುತ್ತಿದೆ. ಇದೇ ವೇಳೆ ಜೈ ಶ್ರೀರಾಮ್ ಎನ್ನುವ ಸಾಂಗ್ ಕೂಡ ಪ್ಲೇ ಮಾಡಿದ್ದರು ಎಂದು ತಿಳಿದು ಬರುತ್ತದೆ.ರಾಮನ ಹೆಸರಿನಂತೆ ಕಾರುಗಳನ್ನ ನಿಲ್ಲಿಸಿ ಲೈಟ್ ಶೋ ಮಾಡಿರುವುದನ್ನು ಡ್ರೋನ್ ಕ್ಯಾಮೆರಾದ ಮೂಲಕ ಸೆರೆ ಹಿಡಿಯಲಾಗಿದೆ. ಹೀಗಾಗಿ ಈ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದ್ದು ಸಾಕಷ್ಟು ಮೆಚ್ಚುಗೆ, ಲೈಕ್ಸ್ ಬರುತ್ತಿವೆ.
ಹಿಂದೂಸ್ತಾನ್ ಸಮಾಚಾರ್
