ಲಕ್ನೋ, 20 ಜನವರಿ(ಹಿ.ಸ):
ಆ್ಯಂಕರ್ :ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ದೇಶದ ಪ್ರಮುಖ ನಗರಗಳ ಪಿವಿಆರ್ , ಐನೋಕ್ಸ್ ಚಿತ್ರ ಮಂದಿರಗಳಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಆನ್ಲೈನ್ ಬುಕ್ಕಿಂಗ್ ಕೂಡ ಆರಂಭವಾಗಿದ್ದು ಟಿಕೆಟ್ ದರ ಕೇವಲ 100 ರೂಪಾಯಿ ಎಂದು ಹೇಳಲಾಗ್ತಿದೆ.
ಭಾರತದ 70 ಪ್ರಮುಖ ನಗರಗಳಲ್ಲಿ 160ಕ್ಕೂ ಅಧಿಕ ಪಿವಿಆರ್ , ಐನೋಕ್ಸ್ ಚಿತ್ರಮಂದಿರಗಳಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನೇರ ಪ್ರಸಾರ ಮಾಡಲಾಗುತ್ತದೆ. ಅಯೋಧ್ಯೆಯ ಈ ಲೈವ್ ಸ್ಟ್ರೀಮಿಂಗ್ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಎಂದು ಸಮಯ ನಿಗದಿ ಮಾಡಲಾಗಿದೆ. ಲೋಕಾರ್ಪಣೆಯನ್ನು ನೋಡಲು ಇಚ್ಚಿಸುವವರು ಪಿವಿಆರ್ , ಐನೋಕ್ಸ್ ಆ್ಯಪ್ ಅಥವಾ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಟಿಕೆಟ್ ದರ ಕೇವಲ 100 ರೂಪಾಯಿ ಇದ್ದು ಟಿಕೆಟ್ ಜೊತೆ ಪಾಪ್ಕಾರ್ನ್ ಮತ್ತು ಪಾನೀಯವನ್ನು ನೀಡುತ್ತಾರೆ ಎಂದು ಹೇಳಲಾಗಿದೆ.
ಪಿವಿಆರ್ , ಐನೋಕ್ಸ್ನ ಸಹ- ಸಿಇಒ ಗೌತಮ್ ದತ್ತಾ ಮಾತನಾಡಿ, ರಾಮಮಂದಿರ ನಿರ್ಮಾಣ ನೂರಾರು ವರ್ಷಗಳ ಕನಸು. ಅದು ನನಸಾಗುತ್ತಿದೆ. ಈ ಮಹತ್ವದ ಸಮಯದ ಬಗ್ಗೆ ಸಂತಸವಾಗುತ್ತಿದೆ. ಇಂತಹ ಭವ್ಯವಾದ ಮತ್ತು ಐತಿಹಾಸಿಕ ಕ್ಷಣಗಳನ್ನು ಮನಸಾರೆ ನಾವು ಅನುಭವಿಸಬೇಕು. ಸಿನಿಮಾ ಸ್ಕ್ರೀನ್ಗಳು ಜನರ ಭಾವನೆಗಳಿಗೆ ಜೀವ ತುಂಬುತ್ತವೆ. ಹೀಗಾಗಿ ಪ್ರಾಣ ಪ್ರತಿಷ್ಠಾಪನೆ ದಿನವನ್ನು ನಿಜವಾದ ರೀತಿಯಲ್ಲಿ ನೋಡಲು ಅದನ್ನು ಜನರಿಗೆ ಒದಗಿಸಲು ನಮಗೆ ಸಿಕ್ಕಿರುವುದು ಒಂದು ಸೌಭಾಗ್ಯವಾಗಿದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
