ಮೈಸೂರು, 19 ಜನವರಿ(ಹಿ.ಸ):
ಆ್ಯಂಕರ್ :ಕಪಿಲಾ ನದಿಯಲ್ಲಿ ಮುಳುಗಿದ್ದ ಮೂವರು ಅಯ್ಯಪ್ಪ ಮಾಲಾಧಾರಿಗಳಲ್ಲಿ ಓರ್ವನನ್ನು ರಕ್ಷಣೆ ಮಾಡಿದ್ದು, ಮತ್ತೋರ್ವನ ಮೃತ ದೇಹ ಪತ್ತೆಯಾಗಿದೆ. ಇನ್ನು ಮಗದೋರ್ವನಿಗಾಗಿ ಹುಡುಕಾಟ ಮುಂದುವರೆದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗವಿರಂಗ, ರಾಕೇಶ್ (19), ಅಪ್ಪು (16) ನೀರು ಪಾಲಾಗಿದ್ದರು. ಇದೀಗ ಗವಿರಂಗ ಎಂಬುವರನ್ನು ರಕ್ಷಣೆ ಮಾಡಲಾಗಿದೆ. ಬಾಲಕ ಅಪ್ಪು ಮೃತ ದೇಹ ಪತ್ತೆಯಾಗಿದೆ. ಇವರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್
