ಇಂಫಾಲ್, 18 ಜನವರಿ(ಹಿ.ಸ):
ಆ್ಯಂಕರ್ :
ಮಣಿಪುರ ದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಘಟನೆಯಲ್ಲಿ ಮೂವರು ಬಿಎಸ್ಎಫ್ ಯೋಧರಿಗೆ ಗಾಯಗಳಾಗಿವೆ. ಹೊಸ ಹಿಂಸಾಚಾರದ ವರದಿಗಳ ನಡುವೆ ಮೊರೆಹ್ ಪ್ರದೇಶದಲ್ಲಿ ಇಬ್ಬರು ಮಣಿಪುರ ಪೊಲೀಸ್ ಕಮಾಂಡೋಗಳು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.
ಶಸ್ತ್ರಸಜ್ಜಿತ ಉಗ್ರಗಾಮಿಗಳು ರಾಜ್ಯ ಪೊಲೀಸ್ ತಂಡದ ಮೇಲೆ ದಾಳಿ ನಡೆಸಿದ್ದಾರೆ, ಇಬ್ಬರು ಕಮಾಂಡೋಗಳನ್ನು ಸೊಮೊರ್ಜಿತ್ ಮೀಟೆಯ್ ಮತ್ತು ತಖೆಲ್ಲಂಬಮ್ ಸೀಲೆಶ್ವರ್ ಸಿಂಗ್ ಎಂದು ಗುರುತಿಸಲಾಗಿದೆ. ತೆಂಗ್ನೌಪಾಲ್ ಜಿಲ್ಲೆಯ ಮೊರೆಹ್ನಲ್ಲಿ ಬಂದೂಕುಗಳು ಮತ್ತು ಸ್ಫೋಟಕಗಳನ್ನು ಬಳಸಿದ್ದಾರೆ.
ಮೊಹಮ್ಮದ್ ಕಮಲ್ ಹಾಸನ್, ಸಾಂಗ್ಸುವಾತುಯಿ ಐಮೋಲ್, ಮೊಹಮ್ಮದ್ ಅಬ್ದುಲ್ ಹಾಸಿಂ, ನಾಗಸೇಪಂ ವಿಮ್, ಎಎಸ್ಐ ಸಿದ್ದಾರ್ಥ್ ತೊಕ್ಚೋಮ್, ಕೆ ಪ್ರೇಮಾನಂದ್ ಗಾಯಗೊಂಡಿದ್ದಾರೆ ಎಂದು ಮಣಿಪುರ ಪೊಲೀಸರು ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
