ಮುಂಬೈ, 16 ಜನವರಿ(ಹಿ.ಸ):
ಆ್ಯಂಕರ್ :
ಭಾರತದ ಸಾಲ, ಅಂದರೆ ಸರ್ಕಾರದ ಸಾಲವು ಜಿಡಿಪಿಯ ಶೇ. 81ರಷ್ಟಿದೆ. ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಸೇರಿದಂತೆ ಸಾಕಷ್ಟು ಯೋಜನೆಗಳಿಗೆ ಸರ್ಕಾರ ಸಾಕಷ್ಟು ಬಂಡವಾಳ ಹಾಕುತ್ತಿದೆ. ಪರಿಣಾಮವಾಗಿ ಸಾಲದ ಪ್ರಮಾಣ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ದೇಶದ ಸಾಲದ ಪ್ರಮಾಣವು ಜಿಡಿಪಿಯ ಶೇ. 81ರಷ್ಟಾಗಿದೆ. ಐಎಂಎಫ್ನ ಇತ್ತೀಚಿನ ವರದಿಯಲ್ಲಿ, ಭಾರತದ ಸಾಲ ಜಿಡಿಪಿಯ ಶೇ. 100ರ ಗಡಿಯನ್ನು ದಾಟಬಹುದು ಎಂದು ಎಚ್ಚರಿಸಿದೆ. ಈ ವಿಚಾರದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಮಾತನಾಡಿದ್ದು, ಸಾಲದ ಬಗ್ಗೆ ಸರ್ಕಾರ ಎಚ್ಚರ ವಹಿಸುವ ಅವಶ್ಯಕತೆ ಎಂದೂ ಸಲಹೆ ನೀಡಿದ್ದಾರೆ.
‘ನಾನು ಐಎಂಎಫ್ ವರದಿ ನೋಡಿದೆ. ಭಾರತದ ಜಿಡಿಪಿ ಮತ್ತು ಸಾಲದ ಅನುಪಾತ ಶೇ. 100ರವರೆಗೆ ಹೋಗಬಹುದು ಎಂದಿರುವುದು ಹೌದು. ಆದರೆ, ತೀರಾ ಪ್ರತಿಕೂಲ ಸಂದರ್ಭದಲ್ಲಿ ಆ ಸ್ಥಿತಿ ಬರಬಹುದು ಎಂದಿದೆ. ಅಷ್ಟು ಸಾಲ ಹೆಚ್ಚುತ್ತದೆ ಎಂದು ವರದಿಯಲ್ಲಿ ಹೇಳಿಲ್ಲ. ಆದಾಗ್ಯೂ ನಾವು ಸಾಲದ ಅನುಪಾತದ ಬಗ್ಗೆ ಎಚ್ಚರ ವಹಿಸುವುದು ಅಗತ್ಯ,’ ಎಂದು ಸುಬ್ಬಾರಾವ್ ಹೇಳಿದ್ದಾರೆ.
ಸಾಲದ ಅನುಪಾತ ಶೇ. 40ಕ್ಕಿಂತ ಕಡಿಮೆ ಇದ್ದರೆ ಸುರಕ್ಷಿತ
ಮಾಜಿ ಆರ್ಬಿಐ ಗವರ್ನರ್ ಪ್ರಕಾರ ಭಾರತದ ಜಿಡಿಪಿ ಮತ್ತು ಸಾಲದ ಅನುಪಾತ ಶೇ. 60ಕ್ಕಿಂತ ಕಡಿಮೆ ಇದ್ದರೆ ಸುರಕ್ಷಿತ. ಕೇಂದ್ರ ಸರ್ಕಾರದ ಸಾಲದ ಅನುಪಾತ ಶೇ. 40 ಮತ್ತು ರಾಜ್ಯ ಸರ್ಕಾರಗಳದ್ದು ಶೇ 20ರಷ್ಟು ಮಿತಿ ಇರಬೇಕು ಎನ್ನುವುದು ಅವರ ಅನಿಸಿಕೆ.
ಹಿಂದೂಸ್ತಾನ್ ಸಮಾಚಾರ್
