ದೆಹಲಿ, 15 ಜನವರಿ(ಹಿ.ಸ):
ಆ್ಯಂಕರ್ :
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆಯಡಿ ಆಯುಷ್ಮಾನ್ ಕಾರ್ಡ್ ಪಡೆದು ಬಡ ಮತ್ತು ದುರ್ಬಲ ವರ್ಗದವರು ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದ ಒಂದು ಲಕ್ಷ ೨೫ ಸಾವಿರ ಕೋಟಿ ರೂಪಾಯಿ ಬಡವರ ಹಣ ಉಳಿತಾಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಈವರೆಗೆ ೩೦ ಕೋಟಿ ಆಯುಷ್ಮಾನ್ ಕಾರ್ಡ್ಗಳನ್ನು ನೀಡಲಾಗಿದೆ. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ೫ ಲಕ್ಷ ರೂಪಾಯಿ ವರೆಗೆ ಆರೋಗ್ಯ ವೆಚ್ಚ ಭರಿಸಲಾಗುವುದು ಎಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್
