
ದೆಹಲಿ, 14 ಜನವರಿ(ಹಿ.ಸ):
ಆ್ಯಂಕರ್ :
ಅಯೋಧ್ಯಾ ಮೂಲಕ ಹಾದುಹೋಗುವ ಎಲ್ಲ ರೈಲುಗಳನ್ನು ಇಂದಿನಿಂದ ೨೨ನೇ ತಾರೀಖಿನವರೆಗೆ ಮಾರ್ಗ ಬದಲಾವಣೆಗೊಳಿಸಲಾಗಿದೆ ಅಥವಾ ರದ್ದುಗೊಳಿಸಲಾಗಿದೆ. ಅಯೋಧ್ಯೆ ರೈಲ್ವೆ ಸ್ವೇಷನ್ನಲ್ಲಿ ಡಬ್ಲಿಂಗ್ ಕಾರ್ಯ ನಡೆದ ಹಿನ್ನೆಲೆಯಲ್ಲಿ ಸುಮಾರು ೩೫ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಯಾತ್ರಾರ್ಥಿಗಳು ಬಸ್ಸುಗಳ ಮೂಲಕ ಅಯೋಧ್ಯೆ ತಲುಪಬಹುದಾಗಿದೆ. ೨೨ನೇ ತಾರಿಖಿನ ನಂತರ ಭಕ್ತರಿಗಾಗಿ ನೂರಕ್ಕೂ ಅಧಿಕ ರೈಲುಗಳ ಸಂಚಾರ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್
